alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಯರ್ ಸಾಹೇಬರ ಲೈವ್ ಸಂದರ್ಶನದಲ್ಲಿ ಬೆಕ್ಕು….

cat

ಇತ್ತೀಚೆಗಷ್ಟೆ ಬಿಬಿಸಿ ವಾಹಿನಿಯಲ್ಲಿ ಪ್ರಸಾರವಾದ ನೇರ ಸಂದರ್ಶನವೊಂದರ ಮಧ್ಯೆ ಮಕ್ಕಳು ಎಂಟ್ರಿಯಾಗಿದ್ದು ಭಾರೀ ಸುದ್ದಿಯಾಗಿತ್ತು. ರಾಬರ್ಟ್ ಕೆಲ್ಲಿ ಎಂಬ ಉಪನ್ಯಾಸಕರೊಬ್ಬರು ಬಿಬಿಸಿ ಲೈವ್ ಸಂದರ್ಶನದಲ್ಲಿ ಪಾಲ್ಗೊಂಡಿದ್ರು.

ಮನೆಯಲ್ಲೇ ಕುಳಿತು ಮಾತನಾಡ್ತಾ ಇದ್ರು. ಈ ವೇಳೆ ಅವರ ಇಬ್ಬರು ತುಂಟ ಮಕ್ಕಳು ಹಾಡುತ್ತ ಕುಣಿಯುತ್ತ ಆ ಕೋಣೆಯೊಳಕ್ಕೆ ಬಂದುಬಿಟ್ಟಿದ್ರು. ಈ ದೃಶ್ಯ ಕೂಡ ಬಿಬಿಸಿಯಲ್ಲಿ ನೇರಪ್ರಸಾರವಾಗಿತ್ತು.

ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಲಟ್ವಿಯನ್ ಮೇಯರ್ ನಿಲ್ಸ್ ಉಸಾಕೋವ್ಸ್ ಕೂಡ ಸಾರ್ವಜನಿಕರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸ್ತಾ ಇದ್ರು. ಇದು ನೇರಪ್ರಸಾರವಾಗ್ತಾ ಇತ್ತು. ಆಗ ಇದ್ದಕ್ಕಿದ್ದಂತೆ ಅವರ ಬೆಕ್ಕೊಂದು ಅವರ ಟೇಬಲ್ ಏರಿತ್ತು.

ಅಷ್ಟಕ್ಕೇ ಅದು ಸುಮ್ಮನಾಗಲಿಲ್ಲ. ಮೇಯರ್ ಗಾಗಿ ತಂದಿಟ್ಟಿದ್ದ ಕಾಫಿಯನ್ನು ಚಪ್ಪರಿಸಿಕೊಂಡು ಕುಡಿದುಬಿಟ್ಟಿದೆ. ಪ್ರೀತಿಯಿಂದ ಬೆಕ್ಕಿನ ಮೈಸವರಿ ಅದನ್ನು ಅಲ್ಲಿಂದ ಓಡಿಸಲು ಮೇಯರ್ ಪ್ರಯತ್ನಿಸಿದರಾದ್ರೂ ಸಾಧ್ಯವಾಗಲಿಲ್ಲ. ಕಾಫಿಯನ್ನು ಪೂರ್ತಿ ಕುಡಿದ ಮೇಲಷ್ಟೆ ಬೆಕ್ಕು ಅಲ್ಲಿಂದ ಕೆಳಗಿಳಿಯಿತು.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...