alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ವರದಿಗಾರನ ಲೈವ್ ರಿಪೋರ್ಟ್

ಪಾಕಿಸ್ತಾನದ ಲಾಹೋರ್ ನಲ್ಲಿ ಮಳೆ ಜೋರಾಗಿದೆ. ಈ ಕುರಿತಾಗಿ ವರದಿ ಮಾಡಲು ತೆರಳಿದ ವರದಿಗಾರ, ಮಕ್ಕಳ ಬಾತ್​ ಟಬ್​​ನಲ್ಲಿ ಕುಳಿತು, ನೈಜ ಚಿತ್ರಣವನ್ನು ನೀಡ್ತಾ ಇದ್ದಾನೆ. ಈ ವರದಿಗಾರನ ಸುತ್ತಲೂ ಮಕ್ಕಳ ಆಟಿಕೆಯ ಬಾತ್​ ಟಬ್​​ ಕಾಣುತ್ತವೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸದ್ದು ಮಾಡ್ತಾ ಇದೆ.

ವರದಿಗಾರ, ಲಾಹೋರ್ ರಸ್ತೆಗಳೆಲ್ಲ ಜಲಮಯವಾಗಿವೆ ಎಂದು ಹೇಳುತ್ತಿರುವ ದೃಶ್ಯ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಸಾಮಾಜಿಕ ತಾಣದಲ್ಲಿ ಹಾಕಲಾದ ದೃಶ್ಯವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ.

ಲಾಹೋರ್​​ನಲ್ಲಿ 38 ವರ್ಷಗಳಲ್ಲಿ ಆಗದಷ್ಟು ಮಳೆ ಈ ಬಾರಿ ದಾಖಲಾಗಿದೆ. ಇದನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿಕೊಡಲು ವರದಿಗಾರ ಆಯ್ಕೆ ಮಾಡಿಕೊಂಡಿರುವ ವಿಧಾನ ಸಾಕಷ್ಟು ಪರ-ವಿರೋಧದ ಕಮೆಂಟ್ ಗಳಿಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...