alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆ ಮನುಷ್ಯನದು,ಬಾಡಿ ನರಿಯದ್ದು..! ಈ ಫಾಕ್ಸ್ ಲೇಡಿ ವಿಶೇಷತೆ ಏನು ಗೊತ್ತಾ?

foxy-lady

ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುವ ಒಂದು ಮಹಿಳೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಹಿಳೆಯ ಹೆಸರು ಮಮತಾಜ್ ಬೇಗಂ. ಕರಾಚಿಯ ಝೂನಲ್ಲಿ ಈ ಮಹಿಳೆಯನ್ನು ನೋಡಲು ಜನ ಬರ್ತಾರೆ. ಮಹಿಳೆ ಮುಖ ಮನುಷ್ಯನದಾಗಿದ್ದು, ಉಳಿದ ಭಾಗವೆಲ್ಲ ನರಿಯ ರೂಪದಲ್ಲಿದೆ. ಹಾಗಾಗಿ ಇಲ್ಲಿಗೆ ಬರುವ ಜನರು ಈ ಮಹಿಳೆಯನ್ನು ಕುತೂಹಲದಿಂದ ನೋಡ್ತಾರೆ.

ವಾಸ್ತವವಾಗಿ ಇದು ಸತ್ಯವಲ್ಲ. ಮಮತಾಜ್ ಮಹಿಳೆಯೂ ಅಲ್ಲ. ಆಕೆಯ ದೇಹ ನರಿಯ ರೂಪದಲ್ಲೂ ಇಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಮುರಾದ್ ಅಲಿ ಹಾಕುವ ವೇಷವಿದು. ಮುರಾದ್ ಅಲಿ ತಂದೆ ಮೊದಲು ಮಮತಾಜ್ ಪಾತ್ರ ನಿರ್ವಹಿಸ್ತಾ ಇದ್ದರಂತೆ. 18 ವರ್ಷಗಳ ಹಿಂದೆ ಅವರು ಸಾವನ್ನಪ್ಪಿದ್ದಾರೆ. ಆ ನಂತ್ರ ಮುರಾದ್ ಈ ವೇಷದಲ್ಲಿ ಇಲ್ಲಿ ಕುಳಿತುಕೊಳ್ಳುತ್ತಾರೆ.

ಫಾಕ್ಸ್ ಲೇಡಿ ಹೆಸರಿನ ಜಾಗದಲ್ಲಿ ಮುರಾದ್ ಕುಳಿತುಕೊಳ್ಳುತ್ತಾನೆ. ಆತನ ತಲೆ ಮಾತ್ರ ಹೊರಗಿರುತ್ತದೆ. ದೇಹವೆಲ್ಲ ಟೇಬಲ್ ಕೆಳಗೆ ಮುಚ್ಚಲ್ಪಟ್ಟಿರುತ್ತದೆ. 12 ಗಂಟೆಗಳ ಕಾಲ ಮುರಾದ್ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುತ್ತಾನೆ. ಆತನನ್ನು ನೋಡಲು 10 ರೂಪಾಯಿ ಕೊಟ್ಟು ಜನ ಬರ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...