alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಥ ಬಾತುಕೋಳಿಗಳಿಗೆ ತಂದೆಯಾದ ನಾಯಿ…!

ನಂಬಿಕಸ್ಥ ಪ್ರಾಣಿ ನಾಯಿ ಎಂಬ ಮಾತಿದೆ. ನಾಯಿ ತನ್ನ ಮರಿಗಳನ್ನು ಪ್ರೀತಿಯಿಂದ ಸಾಕೋದನ್ನು ನಾವು ನೋಡಿರ್ತೇವೆ. ಆದ್ರೆ ಇಲ್ಲೊಂದು ನಾಯಿ ಸಣ್ಣ ಬಾತುಕೋಳಿಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದೆ.

ಇಂಗ್ಲೆಂಡ್ ನ ಎಸೆಕ್ಸ್ ನ 10 ವರ್ಷದ ಲ್ಯಾಬ್ರಡೋರ್ ನಾಯಿ 9 ಬಾತುಕೋಳಿಗಳನ್ನು ದತ್ತು ಪಡೆದಿದೆ. ಬಾತುಕೋಳಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿರುವ ಫ್ರೇಡ್ ಎಂಬ ಈ ನಾಯಿ ಅವುಗಳ ರಕ್ಷಣೆ ಮಾಡ್ತಿದೆ. ಸದ್ಯ ಇಂಟರ್ನೆಟ್ ನಲ್ಲಿ ಫ್ರೇಡ್ ಹಾಗೂ ಬಾತುಕೋಳಿಗಳು ಚರ್ಚೆಯ ವಿಷ್ಯವಾಗಿವೆ.

ಮೌಂಟ್ಫಿಟ್ಟ್ ಕಾಸ್ಟೆಲ್ ನಲ್ಲಿ ಫ್ರೇಡ್ ಹಾಗೂ ಬಾತುಕೋಳಿಗಳಿವೆ. ಈ ಅನಾಥ ಬಾತುಕೋಳಿಗಳ ತಾಯಿ ಯಾರೆಂಬುದು ಮೌಂಟ್ಫಿಟ್ಟ್ ಸಿಬ್ಬಂದಿಗೂ ತಿಳಿದಿಲ್ಲ. ಬಾತುಕೋಳಿಗಳನ್ನು ನೋಡಿದ ಫ್ರೇಡ್ ತಕ್ಷಣ ಅವುಗಳನ್ನು ಪ್ರೀತಿ ಮಾಡಲು ಶುರು ಮಾಡಿತ್ತಂತೆ. ಬಾತುಕೋಳಿಗಳು ಕೂಡ ಫ್ರೇಡ್ ಜೊತೆ ಆಟವಾಡ್ತಾ ಕಾಲ ಕಳೆಯುತ್ತಿವೆ.

ಮೌಂಟ್ಫಿಟ್ಟ್ ನಲ್ಲಿ ಸಾಕಷ್ಟು ಅನಾಥ ಪ್ರಾಣಿಗಳಿವೆ. ಆದ್ರೆ ಫ್ರೇಡ್ ಇಲ್ಲಿನ ಸಾಕು ನಾಯಿ. ಈ ನಾಯಿ ಹಾಗೂ ಬಾತುಕೋಳಿಗಳ ಪ್ರೀತಿ ಎಲ್ಲರನ್ನು ಆಕರ್ಷಿಸುತ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...