alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದ ಮುಖಕ್ಕೆ ಕೇಕ್‌ ಮೆತ್ತಿದ ವಿಡಿಯೊ ವೈರಲ್‌

ಸಿಂಹವೆಂದರೆ ಮಾರುದ್ದ ಓಡಿ ಹೋಗುವವರ ನಡುವೆ ಇಲ್ಲೊಬ್ಬ ಭೂಪ ಸಿಂಹದ ಹುಟ್ಟು ಹಬ್ಬ ಆಚರಿಸುವ ನೆಪದಲ್ಲಿ ಸಿಂಹದ ಮುಖಕ್ಕೆ ಕೇಕ್‌ನಿಂದ ಹೊಡೆದು, ಕೇಕ್‌ನ್ನು ಮುಖದ ತುಂಬಾ ಮೆತ್ತಿರುವ ವಿಡಿಯೋ ವೈರಲ್‌ ಆಗಿದೆ.

ವಿಡಿಯೋದಲ್ಲಿ ಸಿಂಹದ ಪಕ್ಕ ಒಬ್ಬವ್ಯಕ್ತಿ ಇದ್ದು, ಸುತ್ತಲೂ ಆತನ ಸ್ನೇಹಿತರು ಕುಳಿತುಕೊಂಡಿದ್ದಾರೆ. ಈ ವೇಳೆ ಕೈಯಲ್ಲಿ ಕೇಕ್‌ ಹಿಡಿದುಕೊಂಡಿದ್ದಾನೆ. ಸುಮ್ಮನೆ ಸಿಂಹ ಕುಳಿತಿದ್ದಾಗ ಏಕಾಏಕಿ ಕೇಕ್‌ನಿಂದ ಮುಖಕ್ಕೆ ಹೊಡೆದಿದ್ದಾನೆ. ಇದರಿಂದ ಬೆದರಿದಂತೆ ಕಂಡ ಸಿಂಹ ಓಡಲು ಪ್ರಯತ್ನಿಸಿದೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ಈ ರೀತಿ ಹಿಂಸಿಸಿರುವ ವ್ಯಕ್ತಿಯನ್ನು ಬ್ಲೆಂಡ್‌ ಬ್ರಿಫ್ಕಾನಿ ಎಂದು ಹೇಳಲಾಗಿದೆ. ಈತನ ವರ್ತನೆಗೆ ಪಕ್ಕದಲ್ಲಿದ್ದವರು ಜೋರಾಗಿ ನಕ್ಕಿದ್ದು, ಸಿಂಹ ಮಾತ್ರ ನರಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಈ ವಿಡಿಯೋದಲ್ಲಿರುವ ಎಲ್ಲರ ಮುಖಕ್ಕೂ ಇಷ್ಟು ಜೋರಾಗಿ ಕೇಕ್‌ನಿಂದ ಹೊಡೆಯಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ, ಬ್ಲೆಂಡ್‌ ನೆಟ್ಟಿಗರ ಕ್ಷಮೆ ಯಾಚಿಸಿದ್ದು, ಸಿಂಹಕ್ಕೆ ನೋವು ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...