alex Certify
ಕನ್ನಡ ದುನಿಯಾ       Mobile App
       

Kannada Duniya

ಕುಲಭೂಷನ್ ಜಾಧವ್ ಪತ್ನಿ ಭೇಟಿಗೆ ಪಾಕ್ ಒಪ್ಪಿಗೆ

ಭಾರತ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಮೇಲೆ ಪಾಕಿಸ್ತಾನ ಕರುಣೆ ತೋರಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಪತ್ನಿ ಭೇಟಿ ಮಾಡಬಹುದೆಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಮಾನವೀಯತೆ ಮೇಲೆ ಕುಲಭೂಷಣ್ ಜಾಧವ್ ಗೆ ಅವರ ಪತ್ನಿಯನ್ನು ಭೇಟಿ ಮಾಡಿಸುವುದಾಗಿ ಪಾಕ್ ಹೇಳಿದೆ. ಈ ಭೇಟಿ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಬಗ್ಗೆ ಒಂದು ಟಿಪ್ಪಣಿಯನ್ನು ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಭಾರತದ ಹೈ ಕಮಿಷನರ್ ಗೆ ಕಳುಹಿಸಿದೆ.

ಅಕ್ಟೋಬರ್ ನಲ್ಲಿ ಪಾಕಿಸ್ತಾನದ ಹೈ ಕಮಿಷನರ್ ಸೋಹೆಲ್ ಮಹಮೂದ್, ಭಾರತದ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ  ದ್ವಿಪಕ್ಷೀಯ ಸಂಬಂಧಗಳ ಪ್ರಗತಿಗಾಗಿ ಕುಲಭೂಷನ್ ಜಾಧವ್ ಅವರ ಮೇಲಿರುವ ಎಲ್ಲ ಕೇಸ್ ವಾಪಸ್ ಪಡೆದು ಅವರನ್ನು ಭಾರತಕ್ಕೆ ಕಳುಹಿಸುವಂತೆ ಸುಷ್ಮಾ ಹೇಳಿದ್ದರು ಎನ್ನಲಾಗಿದೆ. ಈ ಹಿಂದೆ ಜಾಧವ್ ತಾಯಿ ಭೇಟಿಗೆ ಅವಕಾಶ ನೀಡುವಂತೆ ಅನೇಕ ಮನವಿ ಸಲ್ಲಿಸಲಾಗಿತ್ತು. ಆದ್ರೆ ಪಾಕ್ ಅದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...