alex Certify
ಕನ್ನಡ ದುನಿಯಾ       Mobile App
       

Kannada Duniya

ಕುಲಭೂಷಣ್ ಜಾಧವ್ ಗೆ ಪಾಕ್ ನಿಂದ ಚಿತ್ರಹಿಂಸೆ..?

ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ಮಾಜಿ ನೇವಿ ಅಧಿಕಾರಿ ಕುಲಭೂಷಣ್ ಜಾಧವ್ ಇಂದು ಅವರ ಪತ್ನಿ ಮತ್ತು ತಾಯಿಯನ್ನು ಭೇಟಿ ಮಾಡಿದ್ದಾರೆ.

ಇಸ್ಲಾಮಾಬಾದ್ ನಲ್ಲಿರುವ ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಕುಲಭೂಷಣ್ ಜಾಧವ್ ಗಾಜಿನ ಪರದೆಯೊಳಗಿಂದ ಇಂಟರ್ ಕಾಮ್ ನಲ್ಲಿ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ಭೇಟಿಯ ಸಂಪೂರ್ಣ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ.

ಕುಲಭೂಷಣ್ ಜಾಧವ್ ಕುಟುಂಬದವರ ಮನವಿ ಮೇರೆಗೆ ಭಾರತ ಸರ್ಕಾರ ಭೇಟಿಗೆ ಪ್ರಯತ್ನ ನಡೆಸಿದ್ದು, ಪಾಕಿಸ್ತಾನ ಒಪ್ಪಿಗೆ ನೀಡಿತ್ತು. ಬಿಗಿ ಭದ್ರತೆಯಲ್ಲಿ ಜಾಧವ್ ಕುಟುಂಬದವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಆದರೆ, ಎದುರಿಗಿದ್ದರೂ, ಅವರು ಗಾಜಿನ ಕೊಠಡಿಯಲ್ಲಿ ಬಂಧಿಯಾಗಿದ್ದರು. ಜಾಧವ್ ಅವರ ಮೇಲೆ ಗಾಯದ ಗುರುತು ಕಂಡು ಬಂದಿದ್ದು, ಅವರಿಗೆ ಪಾಕ್ ನಲ್ಲಿ ಹಿಂಸೆ ನೀಡಿರುವ ಸಾಧ್ಯತೆ ಇದೆ.

ಭೇಟಿಯ ಬಳಿಕ ಪಾಕ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಕುಲಭೂಷಣ್ ಜಾಧವ್ ತಮ್ಮ ಕುಟುಂಬದವರ ಭೇಟಿಗೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...