alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ನರಿಬುದ್ಧಿ ತೋರಿಸಿದ ಪಾಕ್

kula-bu-jad

ಇಸ್ಲಾಮಾಬಾದ್: ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ವಿಚಾರದಲ್ಲಿ ಅಂಡು ಸುಟ್ಟ ಬೆಕ್ಕಿನಂತಾಗಿರುವ ಪಾಕಿಸ್ತಾನ ಮತ್ತೆ ನರಿಬುದ್ಧಿಯನ್ನು ಪ್ರದರ್ಶಿಸಿದೆ.

ಕುಲಭೂಷಣ್ ಜಾಧವ್ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಮಾಹಿತಿಯನ್ನೇ ಬಹಿರಂಗಪಡಿಸದ ಪಾಕ್, ಈಗ ಜಾಧವ್ ಕ್ಷಮಾದಾನಕ್ಕಾಗಿ ಸೇನಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಪ್ಪೊಪ್ಪಿಗೆಯ ವಿಡಿಯೋ ಬಿಡುಗಡೆ ಮಾಡಿದೆ.

ಕುಲಭೂಷಣ್ ಜಾಧವ್ ಅವರನ್ನು ಇರಾನ್ ನಿಂದ ಅಪಹರಿಸಿದ್ದ ಪಾಕ್, ಅವರು ಬೇಹುಗಾರಿಕೆ ನಡೆಸಿದ್ದ ಕಾರಣಕ್ಕೆ ಬಂಧಿಸಿರುವುದಾಗಿ ಹೇಳಿ ಗಲ್ಲುಶಿಕ್ಷೆಗೆ ಗುರಿಪಡಿಸಿತ್ತು. ಅವರು ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿರಲಿಲ್ಲ. ಅವರನ್ನು ಅಪಹರಿಸಲಾಗಿದೆ ಎಂದು ಭಾರತ ವಾದಿಸಿತ್ತು.

ಈ ಪ್ರಕರಣ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿದ್ದು, ಮಧ್ಯಂತರ ಆದೇಶ ನೀಡಿರುವ ಕೋರ್ಟ್ ಜಾಧವ್ ಅವರ ಗಲ್ಲು ಶಿಕ್ಷೆಗೆ ತಡೆ ನೀಡಿದೆ. ಇದಾದ ಬಳಿಕ ಪಾಕ್ ಕಳ್ಳಾಟವಾಡಿದ್ದು, ಕುಲಭೂಷಣ್ ಜಾಧವ್ ತಪ್ಪೊಪ್ಪಿಗೆ ಹೇಳಿಕೆ ನೀಡಿ, ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಡಿಯೋ ಬಿಡುಗಡೆ ಮಾಡಿದೆ. ಈ ಅರ್ಜಿಯನ್ನು ಸೇನಾ ಮುಖ್ಯಸ್ಥ ಆಸೀಫ್ ಗಫೂರ್ ತಿರಸ್ಕರಿಸಿದರೆ, ಪಾಕ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...