alex Certify
ಕನ್ನಡ ದುನಿಯಾ       Mobile App
       

Kannada Duniya

ಬಾತುಕೋಳಿಗಳ ಜೊತೆಗಿನ ಈತನ ಬಾಂಧವ್ಯ ನೋಡಿದ್ರೆ ಬೆರಗಾಗ್ತೀರಿ

ಮನುಷ್ಯನಿಗೆ ಅತಿ ಹತ್ತಿರವಾದ ಮತ್ತು ಪ್ರೀತಿ ಪಾತ್ರವಾದ ಪ್ರಾಣಿ ಎಂದರೆ ನಾಯಿ ಎಂಬುದು ಜನಜನಿತ. ನಾಯಿಯು ತನ್ನ ಮಾಲೀಕನ ಮಾತು ಕೇಳುವ ಜತೆಗೆ ಅವನ ರಕ್ಷಣೆಗೆ ನಿಲ್ಲುತ್ತದೆ ಎಂಬುದು ಸಾಮಾನ್ಯ ಸಂಗತಿ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಬಾತುಕೋಳಿ ಮರಿಗಳನ್ನು ಮಕ್ಕಳಂತೆ ಸಾಕಿದ್ದು, ತಾನು ನೀಡುವ ಸಂದೇಶಗಳನ್ನು ಅವು ಅನುಸರಿಸುವಂತೆ ತರಬೇತಿ ನೀಡಿದ್ದಾರೆ.

ಕೊರಿಯಾದ ಒಬ್ಬ ವ್ಯಕ್ತಿ 21 ಬಾತುಕೋಳಿ ಮರಿಗಳನ್ನು ಸಾಕಿದ್ದು, ಮಕ್ಕಳಂತೆ ವಿಶೇಷ ಕಾಳಜಿ ತೋರಿಸಿದ್ದಾನೆ. ಈ ವಿಷಯ ಅಲ್ಲಿನ ವಾಹಿನಿಗಳಲ್ಲಿ ಬಿತ್ತರವಾಗಿದ್ದು, ವ್ಯಾಪಕ ಪ್ರಚಾರ ಪಡೆದುಕೊಂಡಿದೆ.

ಆತ ಬಾತುಕೋಳಿಗಳೊಂದಿಗೆ ವಿಶೇಷ ಬಾಂಧವ್ಯ ಬೆಳೆಸಿಕೊಂಡಿದ್ದು, ಆತ ನೀಡುವ ಸಂದೇಶಗಳನ್ನು ಬಾತುಕೋಳಿ ಮರಿಗಳು ಪಾಲಿಸುವುದು ಅಚ್ಚರಿಯ ಸಂಗತಿಯಾಗಿದೆ. ಆತ ಮನೆಯಿಂದ ಹೊರಾಂಗಣದಲ್ಲಿ ನಡೆದುಕೊಂಡು ಹೋಗುವಾಗ ಬಾತುಕೋಳಿಗಳು ಆತನನ್ನು ಸರತಿ ಸಾಲಿನಲ್ಲಿ ಅನುಸರಿಸುತ್ತವೆ. ಇದರ ವಿಡಿಯೋ ಸಹ ಈಗ ವೈರಲ್ ಆಗಿದೆ. ಈ ಬಗ್ಗೆ ವರದಿ ಮಾಡಿರುವ ಸುದ್ದಿ ವಾಹಿನಿ, ಈ ಬಾತುಕೋಳಿಗಳು ಆತನ ಮಾತನ್ನು ಮಾತ್ರ ಅನುಸರಿಸುತ್ತವೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...