alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಜಿಲೆಂಡ್ ಒಂದು ರಾಷ್ಟ್ರ ಅನ್ನೋದನ್ನೇ ಅರಿಯದವರು ಮಾಡಿದ್ದೇನು..?

nz

ಕ್ಲೋಯ್ ಪಿಲಿಪ್ಸ್ ಹ್ಯಾರಿಸ್ ಎಂಬಾಕೆ ನ್ಯೂಜಿಲೆಂಡ್ ದೇಶದವರು. ಅವರ ಬಳಿ ನ್ಯೂಜಿಲೆಂಡ್ ಪಾಸ್ಪೋರ್ಟ್ ಕೂಡ ಇದೆ. ಕಜಕಿಸ್ತಾನದ ಅಲ್ಮತಿ ವಿಮಾನ ನಿಲ್ದಾಣ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ನ್ಯೂಜಿಲೆಂಡ್ ಒಂದು ದೇಶ ಅನ್ನೋದನ್ನು ಅಧಿಕಾರಿಗಳು ನಂಬುತ್ತಿಲ್ಲ, ನ್ಯೂಜಿಲೆಂಡ್ ರಾಷ್ಟ್ರವಲ್ಲ, ಆಸ್ಟ್ರೇಲಿಯಾದ ಒಂದು ರಾಜ್ಯ ಅಂತಾನೇ ವಾದಿಸಿದ್ದಾರೆ. ವಿಪರ್ಯಾಸ ಅಂದ್ರೆ ವಿಚಾರಣೆ ಕೋಣೆಯಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ಇಟ್ಟುಕೊಂಡಿದ್ದ ನಕ್ಷೆಯಲ್ಲಿ ನ್ಯೂಜಿಲೆಂಡ್ ಇರಲೇ ಇಲ್ಲ. ಹಾಗಾಗಿ ತಮ್ಮ ದೇಶದ ಅಸ್ತಿತ್ವದ ಬಗ್ಗೆ ಅಧಿಕಾರಿಗಳಿಗೆ ಹೇಗೆ ಅರಿವು ಮೂಡಿಸೋದು ಅನ್ನೋ ಗೊಂದಲ ಆ ಮಹಿಳೆಯನ್ನು ಕಾಡಿತ್ತು.

ಕ್ಲೋಯ್ ಒಬ್ಬ ಪತ್ರಕರ್ತೆ, ಜೊತೆಗೆ ಕುದುರೆ ಸವಾರಿಯಲ್ಲೂ ಪಳಗಿದ್ದಾರೆ. ದೇಶ ಸುತ್ತೋಕೆ ಅಂತಾ ಹೊರಟಿದ್ದ ಕ್ಲೋಯ್ ಕಜಕಿಸ್ತಾನದ ಅಜ್ಞಾನಿ ಅಧಿಕಾರಿಗಳಿಂದಾಗಿ ಬಂಧಿಯಾಗಿದ್ರು. ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು, ಕುಡಿಯಲು ನೀರು ಸಹ ಕೊಟ್ಟಿರಲಿಲ್ಲ. ಹೇಗೋ ಕಷ್ಟಪಟ್ಟು ಅಮೆರಿಕದ ಪಾಸ್ ಪೋರ್ಟ್ ಪಡೆದುಕೊಂಡ ಕ್ಲೋಯ್ ಕೊನೆಗೂ ಅಲ್ಲಿಂದ ಮುಕ್ತಿ ಪಡೆದ್ರು. 6 ತಿಂಗಳುಗಳ ಕಾಲ ಬೇರೆ ಬೇರೆ ದೇಶಗಳನ್ನೆಲ್ಲ ಸುತ್ತಾಡಿ ನ್ಯೂಜಿಲೆಂಡ್ ಗೆ ಮರಳಿದ್ರು. ತಮಗಾದ ಕಹಿ ಅನುಭವವನ್ನು ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಬಹಿರಂಗಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...