alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗದಿತ ಸಮಯಕ್ಕಿಂತ ಮುನ್ನ ಕಛೇರಿ ತಲುಪಿದ್ದವನಿಗೆ ಗಿಫ್ಟ್ ಆಗಿ ಸಿಕ್ತು ಕಾರ್

ಸಾಮಾನ್ಯವಾಗಿ ಕಛೇರಿಯಲ್ಲಿ ನೌಕರ ಹಾಗೂ ಬಾಸ್ ಸಂಬಂಧ ಅಷ್ಟಕಷ್ಟೇ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಸಮಯಕ್ಕೆ ಸರಿಯಾಗಿ ಕಛೇರಿಗೆ ತಲುಪುವ ಸಲುವಾಗಿ, ಏನೆಲ್ಲಾ ಪರದಾಟ  ನಡೆಸುತ್ತಾರೆಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಇದು ಬೆಂಗಳೂರು ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ಕಾರ್ಯ ನಿರ್ವಹಿಸುವವರ ಅನುಭವಕ್ಕೆ ಬಂದಿರುತ್ತದೆ.

ಏಕೆಂದರೆ ಅವರು ವಾಸಿಸುವ ಸ್ಥಳ ಒಂದು ಕಡೆ, ಕೆಲಸ ಮಾಡುವ ಕಛೇರಿ ಇನ್ನೊಂದೆಡೆ ಇರುತ್ತದೆ. ಸ್ವಲ್ಪ ತಡ ಮಾಡಿ ಕಛೇರಿಗೆ ತಲುಪಿದರೆ ಬಾಸ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟಕರ ವಿಷಯವೇ ಸರಿ.

ಆದರೆ ಅಪರೂಪದಲ್ಲಿ ಅಪರೂಪದ ಘಟನೆ ಒಂದು ಅಲಬಾಮ (ದಕ್ಷಿಣ ಅಮೆರಿಕಾ) ದಲ್ಲಿ ನಡೆದಿದೆ. ಅಲಬಾಮದ ವಾಲ್ಟರ್ ಎನ್ನುವ ವ್ಯಕ್ತಿ ಒಂದು ಖಾಸಗಿ ಕಂಪನಿಯಲ್ಲಿ  ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅದು ಅವನ ಮೊದಲ ಕೆಲಸ ಮತ್ತು ಕೆಲಸ ಮಾಡುವ ಕಛೇರಿ ವಾಲ್ಟರ್ ಮನೆಯಿಂದ 20  ಮೈಲಿ ದೂರ ಇರುತ್ತದೆ.

ಎಲ್ಲರಿಗೂ ತಮ್ಮ ಮೊದಲ ಕೆಲಸ ಅಂದರೆ ಸಹಜವಾಗಿ ಏನೋ ಒಂದು ತರಹದ ಉತ್ಸಾಹ, ಖುಷಿ ಸರ್ವೇ ಸಾಮಾನ್ಯ. ಅಂದು ಎಲ್ಲರೂ ತಮ್ಮ ಕಛೇರಿಗೆ ನಿಗದಿತ ಸಮಯಕ್ಕಿಂತ ಮುಂಚೆ ತಲುಪಬೇಕೆನ್ನುವ ಧಾವಂತದಲ್ಲಿರುತ್ತಾರೆ. ಅದೇ ರೀತಿ ವಾಲ್ಟರ್ ಕೂಡ ತನ್ನ ಕಛೇರಿಗೆ ಬೇಗ ತಲುಪಬೇಕೆಂದು ಹಿಂದಿನ ರಾತ್ರಿ 11:30 ಕ್ಕೆಲ್ಲಾ ತನ್ನ ಮನೆಯಿಂದ ಕಾರ್ ಏರಿ ಹೊರಟು ಬಿಡುತ್ತಾನೆ. ಆದರೆ ಅವನ ದುರಾದೃಷ್ಟ ಕಾರು ದಾರಿ ಮಧ್ಯದಲ್ಲೆ ಕೆಟ್ಟು ನಿಲ್ಲುತ್ತೆ. ವಾಲ್ಟರ್ ಸ್ವಲ್ಪ ಸಮಯ ದಾರಿ ಕಾಣದಂತಾಗುತ್ತಾನೆ.

ಬಳಿಕ ಅವನು ಕಾಲ್ನಡಿಗೆಯಿಂದ ಕಛೇರಿ ತಲುಪುವ ನಿರ್ಧಾರ ತೆಗೆದುಕೊಂಡು ತನ್ನ ಪ್ರಯಾಣ ಶುರು ಮಾಡಿ ಬೆಳಗಿನ ಜಾವ 4 ಗಂಟೆಗೆ ತನ್ನ ಕಛೇರಿ ಇರುವ ನಗರ ತಲುಪುತ್ತಾನೆ. ಆದರೆ 18 ಮೈಲಿಗಳು ನಡೆದಿದ್ದ ಆತ ತುಂಬಾ ಆಯಾಸದಿಂದ ಒಂದು ಆಟದ ಮೈದಾನದಲ್ಲಿ ಕುಳಿತು ವಿಶ್ರಮಿಸುತ್ತಿದಾಗ ಅಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬೀಳುತ್ತಾನೆ.

ಪೊಲೀಸರು ಆತನನ್ನು ಪ್ರಶ್ನಿಸಿದಾಗ ಆತ ತನ್ನ ಕಥೆಯನ್ನು ಪೊಲೀಸರಿಗೆ ಹೇಳುತ್ತಾನೆ. ಅದನ್ನು ಕೇಳಿದ ಪೊಲೀಸರು ಮಾನವೀಯತೆ ಮೆರೆದು ಅವನಿಗೆ ಆಹಾರ ಕೊಟ್ಟು ಒಂದು ಚರ್ಚ್ ನಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸುತ್ತಾರೆ. ಅದರಂತೆ ಆತ ಸ್ವಲ ಸಮಯ ವಿಶ್ರಾಂತಿ ಪಡೆದು ಕಛೇರಿಗೆ ನಿಗದಿತ ಸಮಯಕ್ಕಿಂತ ಮುಂಚೆ  ತಲುಪುತ್ತಾನೆ.

ವಾಲ್ಟರ್ ಕೆಲಸ ಮುಗಿಸಿ ಮನೆಗೆ ತೆರಳಬೇಕೆಂದರೆ ಮತ್ತೆ ಕಾಲ್ನಡಿಗೆಯಿಂದಾನೇ ತೆರಳಬೇಕು. ಮತ್ತೆ ಪೊಲೀಸರ ಕೈಗೆ ಸಿಕ್ಕ ಪೊಲೀಸರಿಗೆ ಈತನ ಸಮಯ ಪ್ರಜ್ಞೆ ತುಂಬಾನೆ ಇಷ್ಟವಾಗುತ್ತದೆ. ಆತನ ಜೊತೆ ಕಳೆದ ಸಮಯ ಮತ್ತು ಸಮಯ ಪ್ರಜ್ಞೆ ಬಗ್ಗೆ ತಮ್ಮ ಫೇಸ್ ಬುಕ್ ಅಲ್ಲಿ ಹಂಚಿಕೊಳ್ಳುತ್ತಾರೆ. ಸ್ವಲ್ಪ ದಿನಗಳ ಬಳಿಕ ವಾಲ್ಟರ್ ಅವರ ಕಛೇರಿಯ ಸಿ.ಇ.ಓ. ಇದನ್ನು ಗಮನಿಸಿ ವಾಲ್ಟರ್ ಗೆ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಲ್ಲದೇ ತಮ್ಮ ಫೇಸ್ ಬುಕ್ ನಲ್ಲಿ ‘ಈ  ರೀತಿ ಕೆಲಸ ಮಾಡುವವರು ನಮಗೆ ತುಂಬಾನೆ ಕಡಿಮೆ ಸಿಗುತ್ತಾರೆ. ಇಂತಹ ಕೆಲಸಗಾರರನ್ನು ನಾವು ಗೌರವದಿಂದ ಕಾಣಬೇಕು’ ಎಂದು ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...