alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಗಾಗಿ ‘ಸ್ವಯಂವರ’ ಏರ್ಪಡಿಸುತ್ತಿದ್ದಾನೆ ಸರ್ವಾಧಿಕಾರಿ

jong-un-with-sisterಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿಶ್ವದ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾನೆ. ಆತ ಜಾರಿಗೆ ತರುವ ಚಿತ್ರ ವಿಚಿತ್ರ ಕಾನೂನುಗಳ ಕಾರಣಕ್ಕೆ ಕುತೂಹಲಕ್ಕೂ ಕಾರಣನಾಗಿದ್ದಾನೆ.

ದೇಶದ ಗಂಡಸರು ತನ್ನಂತೆ ಹಾಗೂ ಮಹಿಳೆಯರು ತನ್ನ ಪತ್ನಿಯಂತೆ ಕೇಶ ವಿನ್ಯಾಸ ಮಾಡಿಸಿಕೊಳ್ಳಬೇಕೆಂದು ಆದೇಶಿಸಿದ್ದ ಈ ಸರ್ವಾಧಿಕಾರಿ, ಕೆಲ ದಿನದ ಹಿಂದೆ ಏಳು ದಿನಗಳ ಕಾಲ ದೇಶದಲ್ಲಿ ಯಾರೂ ಶವ ಸಂಸ್ಕಾರ ಮಾಡಬಾರದೆಂಬ ಆದೇಶ ಹೊರಡಿಸಿದ್ದ.

ಇದೀಗ ತನ್ನ ಪ್ರೀತಿಯ ಸಹೋದರಿ 29 ವರ್ಷದ ಕಿಮ್ ಯೊ ಜಾಂಗ್ ಗೆ ಸೂಕ್ತ ವರನ ತಲಾಷೆಯಲ್ಲಿರುವ ಕಿಮ್ ಜಾಂಗ್ ಉನ್, ಅದಕ್ಕಾಗಿ ಹಲವಾರು ಷರತ್ತುಗಳನ್ನು ವಿಧಿಸಿದ್ದಾನೆ. ವರ ಪದವೀಧರನಾಗಿರಬೇಕು, ಆತನ ಎತ್ತರ 5 ಅಡಿ 10 ಇಂಚುಗಳಿರಬೇಕು ಹೀಗೆ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಇದರಲ್ಲಿ ತೇರ್ಗಡೆಯಾದ 30 ಮಂದಿಯನ್ನು ಖುದ್ದು ಕಿಮ್ ಜಾಂಗ್ ಉನ್ ಸಂದರ್ಶಿಸಲಿದ್ದಾನೆ. ಆಡಳಿತದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತನ್ನ ಸಹೋದರಿಗೆ 2012 ರಲ್ಲೂ ವರನ ತಲಾಷೆ ಮಾಡಿದ್ದು, ಆದರೆ ಯಾರೊಬ್ಬರೂ ಅರ್ಹತಾ ಮಟ್ಟ ತಲುಪದ ಕಾರಣ ಅದು ವಿಫಲವಾಗಿತ್ತು. ಈ ಬಾರಿಯಾದರೂ ಸೂಕ್ತ ವರ ಸಿಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...