alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ವಾಧಿಕಾರಿಯ ಡಯಟ್ ಮಂತ್ರಕ್ಕೆ ಸೈನಿಕರು ಹೈರಾಣು

kim

ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಉತ್ತರ ಕೊರಿಯಾದ ಸೈನಿಕರ ಪಾಡು. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಕಾಟಕ್ಕೆ ಯೋಧರು ಹೈರಾಣಾಗಿದ್ದಾರೆ. ಕಿಮ್ ಸೈನಿಕರಿಗೆಲ್ಲ ಡಯಟ್ ಫಾಲೋ ಮಾಡುವಂತೆ ಆದೇಶಿಸಿದ್ದು, ಬಹುತೇಕ ಎಲ್ಲರೂ ಈಗ ಬೇಧಿಯಿಂದ ಬಳಲುತ್ತಿದ್ದಾರೆ. ಕಿಮ್ ಜೊಂಗ್ ಉನ್ ಆದೇಶದಂತೆ ಉತ್ತರ ಕೊರಿಯಾದ ಗಡಿ ಭದ್ರತಾ ಘಟಕದ ಸೈನಿಕರು ಡಯಟ್ ಫುಡ್ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಸೈನಿಕರಿಗೆ ಅಂತಾನೇ ಬೇರೆ ಬೇರೆ ರೀತಿಯ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಕಳಿಸಿಕೊಡಲಾಗಿದೆಯಂತೆ. ಅದನ್ನು ತಿಂದವರೆಲ್ಲ ಈಗ ಗಡಿ ಕಾಯುವ ಬದಲು ದಿನವಿಡೀ ಶೌಚಾಲಯದಲ್ಲಿ ಕೂರುವಂತಾಗಿದೆ.

ಭದ್ರತಾ ಪಡೆಯಲ್ಲಿರುವ ಎಲ್ಲರೂ ಅತಿಸಾರದಿಂದ ಬಳಲುತ್ತಿದ್ದಾರೆ. ಗಡಿಯಲ್ಲಿರುವ ಯೋಧರು ಡಯಟ್ ಪ್ರಕಾರ ಆಹಾರ ಸೇವಿಸುತ್ತಿಲ್ಲ ಅನ್ನೋ ಸುದ್ದಿ ಕಿಮ್ ಕಿವಿಗೆ ಬಿದ್ದಿತ್ತು. ಇನ್ಮೇಲೆ ಅವರಿಗೂ ಊಟ ತಯಾರಿಸಿ ಕೊಡುವುದು ನಿಮ್ಮ ಜವಾಬ್ಧಾರಿ ಅಂತಾ ಪೀಪಲ್ಸ್ ಆರ್ಮ್ಡ್ ಫೋರ್ಸ್ ಗೆ ಕಿಮ್ ಆದೇಶ ಮಾಡಿಬಿಟ್ಟಿದ್ದ. ಅದರಂತೆ ಸಶಸ್ತ್ರ ಪಡೆ ಅಡುಗೆ ಮಾಡಿ ಕಳಿಸಿಕೊಟ್ಟಿದೆ, ಆದ್ರೆ ಅದರಲ್ಲಿ ಕಬ್ಬಿಣದ ಪುಡಿ, ದಾರ ಸೇರಿದಂತೆ ಬೇಡದ ವಸ್ತುಗಳೆಲ್ಲ ಇತ್ತು. ಅದನ್ನು ಗಮನಿಸದೆ ತಿಂದ ಗಡಿಕಾಯುವ ಯೋಧರಿಗೆ ಬೇಧಿ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...