alex Certify
ಕನ್ನಡ ದುನಿಯಾ       Mobile App
       

Kannada Duniya

ಭಯಾನಕ ಅನುಭವ ಬಿಚ್ಚಿಟ್ಟಿದ್ದಾಳೆ ಕಿಡ್ನಾಪ್ ಆಗಿದ್ದ ಮಾಡೆಲ್

20ರ ಹರೆಯದ ಬ್ರಿಟನ್ ಮೂಲದ ಮಾಡೆಲ್ ಒಬ್ಬಳನ್ನು ಮಿಲಾನ್ ನಲ್ಲಿ ಅಪಹರಿಸಲಾಗಿತ್ತು. ರೂಪದರ್ಶಿಯನ್ನು ಕಿಡ್ನಾಪರ್ ಗಳು ಸೂಟ್ ಕೇಸ್ ಒಂದರಲ್ಲಿ ಬಂಧಿಸಿಟ್ಟಿದ್ದರು. ನಂತರ 20 ಕೋಟಿ ರೂಪಾಯಿಗೆ ಆನ್ ಲೈನ್ ನಲ್ಲೇ ಅವಳನ್ನು ವೇಶ್ಯಾವಾಟಿಕೆಗೆ ಮಾರಾಟ ಕೂಡ ಮಾಡಿದ್ದಾರೆ.

ಅಪಹರಣವಾಗಿದ್ದ ರೂಪದರ್ಶಿ ಕ್ಲೋಯ್ ಆಯಿಲಿಂಗ್ ಒಂದು ಮಗುವಿನ ತಾಯಿ. ಫೋಟೋ ಶೂಟ್ ಹೆಸರಲ್ಲಿ ಅವಳನ್ನು ಕರೆಸಿಕೊಂಡು ಮಿಲಾನ್ ನಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಕುದುರೆಗೆ ನೀಡುವ ನಿದ್ದೆ ಔಷಧಿಯನ್ನು ಇಂಜೆಕ್ಟ್ ಮಾಡಿ ಅವಳನ್ನು ಸೂಟ್ ಕೇಸ್ ಗೆ ತುಂಬಿಸಿದ್ದರು.

ಕೈಕಾಲುಗಳನ್ನು ಕಟ್ಟಿ ಬಾಯಿಗೆ ಟೇಪ್ ಅಂಟಿಸಿದ್ರು. ಉತ್ತರ ಇಟಲಿಯ ಬೊರ್ಗೇಲ್ ಎಂಬ ಕುಗ್ರಾಮಕ್ಕೆ ದುಷ್ಕರ್ಮಿಗಳು ಅವಳನ್ನು ಕೊಂಡೊಯ್ದಿದ್ದಾರೆ. ಅವರೆಲ್ಲಾ ಬ್ಲಾಕ್ ಡೆತ್ ಗ್ರೂಪ್ ನ ಸದಸ್ಯರಾಗಿದ್ರು. ಆನ್ ಲೈನ್ ನಲ್ಲೇ ರೂಪದರ್ಶಿಯನ್ನು ಮಾರಾಟ ಮಾಡಲು ಡೀಲ್ ಆಗಿತ್ತು.

ಆದ್ರೆ ಕ್ಲೋಯ್ ಒಂದು ಮಗುವಿನ ತಾಯಿ ಅಂತಾ ಗೊತ್ತಾಗ್ತಿದ್ದಂತೆ ಅಪಹರಣಕಾರರು ಸುಮ್ಮನಾಗಿದ್ದಾರೆ. ಯಾಕಂದ್ರೆ ಅಮ್ಮಂದಿರನ್ನು ವೇಶ್ಯಾವಾಟಿಕೆಗೆ ತಳ್ಳುವುದು ಅವರ ಸಂಘಟನೆಯ ನಿಯಮಕ್ಕೆ ವಿರುದ್ಧವಾಗಿತ್ತು. ಹಾಗಾಗಿ ಅವಳನ್ನು ಬಿಡುಗಡೆ ಮಾಡಿದ್ದಾರೆ.

ಆದ್ರೆ ಅದಕ್ಕೂ ಮುನ್ನ ಅವರದ್ದೊಂದು ಷರತ್ತಿತ್ತು. ಇನ್ನೊಂದು ವಾರದೊಳಗೆ 500000 ಡಾಲರ್ ಬಿಟ್ ಕಾಯಿನ್ಸ್ ಪಾವತಿಸಬೇಕು, ಇಲ್ಲದೇ ಇದ್ರೆ ಹತ್ಯೆ ಮಾಡೋದಾಗಿ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ರು. ತನಗಾದ ಭಯಾನಕ ಅನುಭವವನ್ನು ಕ್ಲೋಯ್ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...