alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯವೇ ಮಾರುಕಟ್ಟೆಗೆ ಬರಲಿದೆ ಸಸ್ಯಹಾರಿ ಚಿಕನ್

ಸಸ್ಯಹಾರಿಗಳಾಗಿದ್ದು ಚಿಕನ್ ನಿಂದ ದೂರವಿದ್ದರೆ ನಿಮಗೊಂದು ಸುದ್ದಿ. ಶೀಘ್ರವೇ ಮಾರುಕಟ್ಟೆಗೆ ಸಸ್ಯಹಾರಿ ಚಿಕನ್ ಬರಲಿದೆ. ಯಸ್, ಕೆಎಫ್ಸಿ ಸಸ್ಯಹಾರಿ ಚಿಕನ್ ರುಚಿಯನ್ನು ಭಾರತೀಯರಿಗೆ ಪರಿಚಯಿಸಲು ಮುಂದಾಗಿದೆ.

ವಿಶ್ವದ ಪ್ರಮುಖ ಅಮೆರಿಕನ್ ಕಂಪನಿ ಕೆಎಫ್ಸಿ ಸಸ್ಯಹಾರಿ ಚಿಕನ್ ಪ್ರಯೋಗ ಶುರು ಮಾಡಿದೆ. ಕೆಎಫ್ಸಿ ಮೊದಲು ಬ್ರಿಟನ್ ನಲ್ಲಿ ತನ್ನ ಸಸ್ಯಹಾರಿ ಚಿಕನ್ ಶುರು ಮಾಡಲಿದೆ. ಈ ಚಿಕನ್ ಗೆ ಕೆಎಫ್ಸಿ ತನ್ನ ಪ್ರಸಿದ್ಧ ಮಸಾಲೆಗಳ ಪ್ರಯೋಗ ಮಾಡಲಿದೆ. ಇದು ಚಿಕನ್ ನಂತಹ ಸ್ವಾದವನ್ನು ಸಸ್ಯಹಾರಿ ಆಹಾರದಲ್ಲಿ ನೀಡಲಿದೆ.

ಭಾರತ ಹೊರತುಪಡಿಸಿ ಬೇರೆ ಎಲ್ಲೂ ಕೆಎಫ್ಸಿ ಸಸ್ಯಹಾರಿಗಳಿಗಾಗಿ ತನ್ನ ಮೆನು ಬದಲಿಸಿಲ್ಲ. 2019 ರಲ್ಲಿ ಸಸ್ಯಹಾರಿ ಚಿಕನ್ ಪರೀಕ್ಷೆ ನಡೆಯಲಿದೆ. ಅದು ಯಶಸ್ವಿಯಾದ್ರೆ ವಿಶ್ವದಾದ್ಯಂತ ಕೆಎಫ್ಸಿಯಲ್ಲಿ ಸಸ್ಯಹಾರಿ ಚಿಕನ್ ಲಭ್ಯವಾಗಲಿದೆ. ವಿಶ್ವದಾದ್ಯಂತ ಜನರು ಆರೋಗ್ಯಕ್ಕೆ ಹೆಚ್ಚು ಗಮನ ನೀಡ್ತಿದ್ದಾರೆ. ಹಾಗಾಗಿ ಮಾಂಸಹಾರಿ ಆಹಾರಗಳಿಂದ ದೂರ ಸರಿಯುತ್ತಿದ್ದಾರೆ. ಇದನ್ನು ಗಮನಿಸಿರುವ ಕೆಎಫ್ಸಿ ಸಸ್ಯಹಾರಿ ಚಿಕನ್ ಗೆ ಸಿದ್ಧತೆ ನಡೆಸಿದೆ. ಸೋಯಾ ಚೀಸ್, ಸೋಯಾ ಪನ್ನೀರ್ ಹಾಗೂ ಸೋಯಾದಿಂದ ತಯಾರಾದ ಬರ್ಗರ್ ತಯಾರಿಸಲು ಮುಂದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...