alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿ ಕೆಲಸ ಕಳೆದುಕೊಂಡ

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ದುಬೈನ ಗಲ್ಫ್ ಕಂಪನಿಯೊಂದು ತೆಗೆದುಕೊಂಡ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೇರಳ ಪ್ರವಾಹದ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಸಂವೇದನಾರಹಿತ ಪೋಸ್ಟ್ ಹಾಕಿದ್ದ ಕೇರಳ ಮೂಲದ ವ್ಯಕ್ತಿಯನ್ನು ಕಂಪನಿ ಕೆಲಸದಿಂದ ತೆಗೆದುಹಾಕಿದೆ.

ಲುಲು ಗ್ರೂಪ್ ಇಂಟರ್ನ್ಯಾಷನಲ್ ನ ಓಮನ್ ಶಾಖೆಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡ್ತಿದ್ದ ಕೇರಳದ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿದೆ. ಪ್ರವಾಹ ಸಂತ್ರಸ್ತರಿಗೆ ನೈರ್ಮಲ್ಯ ಅಗತ್ಯತೆಗೆ ಸಂಬಂಧಿಸಿದಂತೆ ಸಹಾಯ ಮಾಡಲು ಫೇಸ್ಬುಕ್ ಪೋಸ್ಟ್ ಮೂಲಕ ನೆರವು ಕೇಳಿದ್ದ. ಆತನ ಪೋಸ್ಟ್ ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಕಂಪನಿ ನಿಂದಿಸಿದೆ. ಜೊತೆಗೆ ಕೆಲಸದಿಂದ ತೆಗೆದುಹಾಕಿದೆ.

ಘಟನೆ ನಂತ್ರ ತಪ್ಪನ್ನರಿತ ವ್ಯಕ್ತಿ ಫೇಸ್ಬುಕ್ ಮೂಲಕವೇ ಕ್ಷಮೆ ಕೇಳಿದ್ದಾನೆ. ಕೇರಳಿಗರನ್ನು ಛೇಡಿಸುವ ಪೋಸ್ಟ್ ಹಾಕಿ ತಪ್ಪು ಮಾಡಿದ್ದೇನೆ. ನನಗೆ ತಪ್ಪಿನ ಅರಿವಾಗಿದೆ. ಫೇಸ್ಬುಕ್ ಮೂಲಕವೇ ಕ್ಷಮೆ ಕೋರುತ್ತೇನೆ ಎಂದಿದ್ದಾನೆ. ಲೂಲು ಗ್ರೂಪ್ ಮಾಲೀಕ ಹಾಗೂ ಬಿಲಿಯನೇರ್ ಎಂ.ಎ. ಯುಸೂಫ್ ಕೇರಳದ ಜೊತೆ ಉತ್ತಮ ಸಂಬಂಧ ಹೊಂದಿದ್ದು, ನೆರೆ ಪರಿಹಾರವಾಗಿ ಕೇರಳ ಮುಖ್ಯಮಂತ್ರಿಗಳಿಗೆ 9.25 ಯುಎಇ ದಿರ್ಹಾಮ್ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...