alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದಲ್ಲಿ ಕೇರಳ ಪಾದ್ರಿಗೆ ಚಾಕು ಇರಿತ

priest

ಆಸ್ಟ್ರೇಲಿಯಾದಲ್ಲೂ ಭಾರತೀಯನ ಮೇಲೆ ಜನಾಂಗೀಯ ದಾಳಿ ನಡೆದಿದೆ. ಮೆಲ್ಬೊರ್ನ್ ನಲ್ಲಿ ಕೇರಳ ಮೂಲದ ಪಾದ್ರಿಯೊಬ್ಬರಿಗೆ ಬಿಳಿಯನೊಬ್ಬ ಚಾಕುವಿನಿಂದ ಇರಿದಿದ್ದಾನೆ. ದಾಳಿಗೊಳಗಾದ ಪಾದ್ರಿ ಟಾಮಿ ಕಲತೂರ್, ಕೋಜಿಕ್ಕೋಡ್ ಮೂಲದವರು.

ಭಾನುವಾರದ ಪ್ರಾರ್ಥನೆಗೆ ಸಜ್ಜಾಗಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ. ಚಾಕು ಇರಿಯುವ ಮುನ್ನ ದಾಳಿಕೋರ ನೀನು ಭಾರತೀಯ ಪಾದ್ರಿಯಾ ಅಂತ ಟಾಮಿ ಬಳಿ ಪ್ರಶ್ನಿಸಿದ್ದಾನೆ. ಟಾಮಿ ಕಳೆದ ನಾಲ್ಕು ವರ್ಷಗಳಿಂದ ಮೆಲ್ಬೊರ್ನ್ ನ ಸೇಂಟ್ ಮ್ಯಾಥ್ಯೂಸ್ ಪರಿಶ್ ಚರ್ಚ್ ನಲ್ಲಿ ಪಾದ್ರಿಯಾಗಿದ್ದಾರೆ.

ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು ಅಂತಾ ದುಷ್ಕರ್ಮಿ ಟಾಮಿ ಬಳಿ ಹೇಳಿದ್ದ. ಪ್ರಾರ್ಥನೆಯ ನಂತರ ಮಾತನಾಡೋಣ ಅಂತಾ ಟಾಮಿ ಪ್ರತಿಕ್ರಿಯಿಸಿದ್ದಾರೆ. ಕೂಡಲೇ ತನ್ನ ಬಳಿಯಿದ್ದ ಚಾಕುವಿನಿಂತ ಟಾಮಿ ಕತ್ತಿನ ಮೇಲೆ ಇರಿದಿದ್ದಾನೆ. ಆದ್ರೆ ಟಾಮಿ, ಚಳಿಯಿಂದ ಬಚಾವಾಗಲು ದಪ್ಪನೆಯ ಬಟ್ಟೆ ಧರಿಸಿದ್ದರಿಂದ ಯಾವುದೇ ಅಪಾಯವಾಗಿಲ್ಲ.

ಘಟನೆ ಬಳಿಕ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಭಾರತೀಯನ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ ಕೂಡ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...