alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳಿಗರ ಋಣ ಸಂದಾಯಕ್ಕೆ ನಿಂತ ಯುನೈಟೆಡ್ ಅರಬ್ ಎಮಿರೇಟ್ಸ್

ಕೇರಳದ ಪ್ರವಾಹಕ್ಕೆ ದೇಶವಷ್ಟೇ ಅಲ್ಲ ವಿದೇಶಿಗರ ಮನವೂ ಮಿಡಿಯುತ್ತಿದೆ. ತನ್ನ ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ಅಪಾರ ಕೊಡುಗೆ ನೀಡ್ತಿರೋ ಕೇರಳಿಗರ ಕಷ್ಟಕ್ಕೆ ಈಗ ಅರಬ್ ರಾಷ್ಟ್ರಗಳು ಸ್ಪಂದಿಸುತ್ತಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಪ್ರಧಾನಿ ಮತ್ತು ದುಬೈನ ದೊರೆ ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್ ಕೇರಳದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸೋದಕ್ಕಾಗಿ ತುರ್ತು ಪರಿಸ್ಥಿತಿ ಕಮಿಟಿಯೊಂದನ್ನ ರಚಿಸಿದ್ದಾರೆ.

ಈ ಬಗ್ಗೆ ಇಂಗ್ಲೀಷ್ ಮತ್ತು ಮಲಯಾಳಂ ಭಾಷೆಯಲ್ಲಿ ಸರಣಿ ಟ್ವೀಟ್ ಗಳನ್ನ ಮಾಡಿರುವ ದುಬೈ ದೊರೆ ನಮ್ಮ ದೇಶದ ಯಶಸ್ಸಿನ ಪಾಲುದಾರರಲ್ಲಿ ಕೇರಳಿಗರ ಪಾತ್ರವೂ ಇದೆ. ಹಾಗಾಗಿ ಕೇರಳಿಗರ ಕಷ್ಟಕ್ಕೆ ಸ್ಪಂದಿಸಬೇಕಾದ ವಿಶೇಷ ಜವಾಬ್ದಾರಿ ನಮ್ಮ ಮೇಲೂ ಇದೆ. ಯುಎಇ ಮತ್ತು ಅರಬ್ ದೇಶದಲ್ಲಿರುವ ಭಾರತೀಯರ ಸಮುದಾಯ ಒಂದಾಗಿ ಈ ಕಾರ್ಯಕ್ಕೆ ಮುಂದಾಗಿದೆ ಅಂತ ದುಬೈ ದೊರೆ ತಿಳಿಸಿದ್ದಾರೆ.

ಯುಎಇ ನಲ್ಲಿರುವ ಭಾರತೀಯ ರಾಯಭಾರಿ ನವ್ದೀಪ್ ಸಿಂಗ್ ಸೂರಿ ಅವರ ಅಧ್ಯಕ್ಷತೆಯಲ್ಲಿ ಕಮಿಟಿ ರಚನೆಯಾಗಿದ್ದು, ಸೋಮವಾರ ಈ ಕಮಿಟಿಯ ಸಭೆ ನಡೆಯಲಿದೆ. ಕಾರ್ಯಕರ್ತರು ಮತ್ತು ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಪರಿಹಾರ ನಿಧಿ ಸಂಗ್ರಹಿಸುವ ಸಾಧ್ಯತೆ ಇದೆ. ಯುಎಇನಲ್ಲಿರುವ 2.6 ಮಿಲಿಯನ್ ಜನಸಂಖ್ಯೆಯಲ್ಲಿ ಶೇಕಡಾ 30ರಷ್ಟು ಭಾಗ ಕೇರಳಿಗರು ಇದ್ದಾರೆ. ಅರಬ್ ರಾಷ್ಟ್ರಗಳ ಪ್ರಮುಖ ಕಾರ್ಯಗಳಲ್ಲಿ ಕೇರಳಿಗರ ಕೊಡುಗೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...