alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಪುನರ್ ನಿರ್ಮಾಣಕ್ಕೆ ವಿದೇಶಗಳ ಆರ್ಥಿಕ ನೆರವು ಪಡೆಯಲ್ಲ ಭಾರತ…!

ಕೇರಳ ಪ್ರವಾಹ ಪೀಡಿತರಿಗೆ ದೇಶ-ವಿದೇಶಗಳಿಂದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ. ಆದ್ರೆ ವಿದೇಶಿ ನೆರವನ್ನು ಭಾರತ ನಿರಾಕರಿಸುವ ಸಾಧ್ಯತೆ ಹೆಚ್ಚಿದೆ. ಕೇರಳ ಪ್ರವಾಹದ ನಂತ್ರ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಯುಎಇ, ಕತಾರ್ ಹಾಗೂ ಮಾಲ್ಡೀವ್ಸ್ ರಾಜ್ಯಗಳು ಸಹಾಯ ಮಾಡಲು ಮುಂದೆ ಬಂದಿವೆ. ಆದ್ರೆ ಭಾರತ ಈ ಸಹಾಯವನ್ನು ನಿರಾಕರಿಸುವ ಸಾಧ್ಯತೆ ಹೆಚ್ಚಿದೆ.

ಉನ್ನತ ಮೂಲಗಳ ಪ್ರಕಾರ, ಭಾರತ ವಿದೇಶದ ಸಹಾಯ ನಿರಾಕರಿಸಲಿದೆಯಂತೆ. ನೆರವಿಗೆ ಮುಂದೆ ಬಂದ ದೇಶಗಳಿಗೆ ಕೃತಜ್ಞತೆ ಸಲ್ಲಿಸಿರುವ ಭಾರತ ತನ್ನ ಸಂಪನ್ಮೂಲ ಬಳಸಿಕೊಂಡು ಕೇರಳ ಪುನರ್ ನಿರ್ಮಾಣ ಕಾರ್ಯ ಮಾಡಲಿದೆಯಂತೆ. ಭಾರತದಲ್ಲಿರುವ ಸಂಪನ್ಮೂಲ ಕೇರಳ ಪುನರ್ ನಿರ್ಮಾಣಕ್ಕೆ ಸಾಕು ಎಂಬುದು ಭಾರತದ ಅಭಿಪ್ರಾಯವಾಗಿದೆ. ದೇಶಗಳಿಗೆ ಕೃತಜ್ಞತೆ ಸಲ್ಲಿಸಲಿರುವ ಭಾರತ, ನೆರವು ಪಡೆಯುವುದಿಲ್ಲವಂತೆ.

ವಿದೇಶದಲ್ಲಿರುವ ಭಾರತೀಯರ ನೆರವನ್ನು ಭಾರತ ಪಡೆಯುವುದಿಲ್ಲ ಎಂದಿಲ್ಲ. ಕೇರಳ ಪ್ರವಾಹ ಪೀಡಿತ ಜನರ ನೆರವಿಗೆ ಮುಂದೆ ಬಂದಿದ್ದ ಯುಎಇ 700 ಕೋಟಿ ನೀಡುವುದಾಗಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರ ನೀಡಿರುವ ಪರಿಹಾರ ಧನಕ್ಕಿಂತ ಇದು ಹೆಚ್ಚಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...