alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾನಿಟರಿ ಪ್ಯಾಡ್ ಗಾಗಿ ಚಾಲಕರ ಜೊತೆ ಸಂಬಂಧ ಬೆಳೆಸ್ತಾರೆ…!

ಮುಟ್ಟು ಹಾಗೂ ಸ್ಯಾನಿಟರಿ ಪ್ಯಾಡ್ ಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದ್ರೂ ಪ್ರಪಂಚದ ಅನೇಕ ಕಡೆ ಸ್ಯಾನಿಟರಿ ಪ್ಯಾಡ್ ಪ್ರವೇಶವೇ ಆಗಿಲ್ಲ. ಇದಕ್ಕೆ ಕೀನ್ಯಾ ಕೂಡ ಹೊರತಾಗಿಲ್ಲ.

ಕೀನ್ಯಾ ಹುಡುಗಿಯರ ಸ್ಥಿತಿ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ಅಲ್ಲಿನವರು ಸ್ಯಾನಿಟರಿ ಪ್ಯಾಡ್ ಬೇಕೆಂದ್ರೆ ಪುರುಷರ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಸ್ಥಿತಿ ನಿರ್ಮಾಣವಾಗಿದೆ. ಯುನಿಸೆಫ್ ನ ಸಂಶೋಧನೆಯೊಂದರಲ್ಲಿ ಈ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಇಲ್ಲಿನ ರಾಜಧಾನಿ ನೈರೋಬಿಯ ಕಿಬೇರಾ ಸ್ಲಮ್ ನಲ್ಲಿ ವಾಸವಾಗಿರುವ ಶೇಕಡಾ 65ರಷ್ಟು ಮಹಿಳೆಯರು ಸ್ಯಾನಿಟರಿ ಪ್ಯಾಡ್ ಗೆ ಪ್ರತಿಯಾಗಿ ದೇಹ ನೀಡಿದ್ದಾರಂತೆ.

ಕೀನ್ಯಾ ದ ಶೇಕಡಾ 54ರಷ್ಟು ಮಹಿಳೆಯರು ಸ್ಯಾನಿಟರಿ ಪ್ಯಾಡ್ ಪಡೆಯಲು ಸಂಘರ್ಷ ಮಾಡ್ತಿದ್ದಾರೆ. ಶೇಕಡಾ 22ರಷ್ಟು ಶಾಲೆಗೆ ಹೋಗುವ ಹುಡುಗಿಯರು ಸ್ವತಃ ತಾವೇ ಸ್ಯಾನಿಟರಿ ಪ್ಯಾಡ್ ಖರೀದಿ ಮಾಡ್ತಿದ್ದಾರಂತೆ. ಸ್ಯಾನಿಟರಿ ಪ್ಯಾಡ್ ಗೆ ಪ್ರತಿಯಾಗಿ ಸೆಕ್ಸ್ ಇಲ್ಲಿ ಸಾಮಾನ್ಯ ಸಂಗತಿ ಎನ್ನುತ್ತಾರೆ ಜನರು.

ಎರಡು ಕಾರಣಗಳಿಗೆ ಇಲ್ಲಿನ ಹುಡುಗಿಯರು ಸ್ಯಾನಿಟರಿ ಪ್ಯಾಡ್ ಗೆ ಪ್ರತಿಯಾಗಿ ಚಾಲಕರ ಜೊತೆ ಮಲಗುತ್ತಾರಂತೆ. ಎಲ್ಲರಿಗೂ ತಿಳಿದಿರುವಂತೆ ಬಡತನ ಮುಖ್ಯ ಕಾರಣ. ಹಣವಿಲ್ಲದ ಹುಡುಗಿಯರು ದೇಹ ನೀಡಿ ಪ್ಯಾಡ್ ಪಡೆಯುತ್ತಿದ್ದಾರೆ. ಇನ್ನೊಂದು ಸಾರಿಗೆ ವ್ಯವಸ್ಥೆ. ಕೀನ್ಯಾದ ಕೆಲ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯವಿರಲಿ, ಸೂಕ್ತ ರಸ್ತೆಯೂ ಇಲ್ಲ. ಕೆಲ ಗ್ರಾಮಗಳು ಇನ್ನೂ ಸ್ಯಾನಿಟರಿ ಪ್ಯಾಡ್ ನೋಡಿಲ್ಲ. ಮೂಲೆ ಮೂಲೆಯ ಪ್ರದೇಶಗಳಿಗೆ ಸ್ಯಾನಿಟರಿ ಪ್ಯಾಡ್ ತಲುಪಿಸುವ ವಾಹನ ಚಾಲಕರು ಪ್ಯಾಡ್ ಬದಲು ಸೆಕ್ಸ್ ಆಫರ್ ಮಾಡ್ತಾರೆ. ಅನಿವಾರ್ಯವಾಗಿ ಮಹಿಳೆಯರು ಈ ಕೆಲಸ ಮಾಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...