alex Certify
ಕನ್ನಡ ದುನಿಯಾ       Mobile App
       

Kannada Duniya

ಸಫಾರಿಯಿಂದ ತಪ್ಪಿಸಿಕೊಂಡು ಊರಿಗೆ ಲಗ್ಗೆ ಇಟ್ಟ ಸಿಂಹಗಳು

nyrobia

ಕಾಡುಪ್ರಾಣಿಗಳು ಊರಿಗೆ ನುಗ್ಗಿದ ಸಂದರ್ಭದಲ್ಲಿ ಹೇಗೆಲ್ಲಾ ಅವಾಂತರಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ ಇದೆ. ಕೆಲವೊಮ್ಮೆ ಊರಿಗೆ ನುಗ್ಗಿದ ಕಾಡುಪ್ರಾಣಿಗಳು ಹಲವರ ಸಾವಿಗೆ ಕಾರಣವಾಗಿವೆ. ಇತ್ತೀಚೆಗಷ್ಟೇ ಬೆಂಗಳೂರಿನ ವಿಬ್ ಗಯಾರ್ ಶಾಲೆಗೆ ಚಿರತೆಯೊಂದು ನುಗ್ಗಿತ್ತು.

ಈ ವಿಷಯ ಹಾಗಿರಲಿ, ಇಲ್ಲೇನಾಗಿದೆ ನೋಡಿ, ಕೀನ್ಯಾದ ರಾಷ್ಟ್ರೀಯ ಅಭಯಾರಣ್ಯವೊಂದರಲ್ಲಿ ಸಿಂಹಗಳು ತಪ್ಪಿಸಿಕೊಂಡಿವೆ. ಕೀನ್ಯಾ ರಾಜಧಾನಿ ನೈರೋಬಿ ಸಮೀಪದಲ್ಲಿಯೇ ಇರುವ ಅಭಯಾರಣ್ಯದಲ್ಲಿ ಸುಮಾರು 30 ಕ್ಕೂ ಅಧಿಕ ಸಿಂಹಗಳಿವೆ. ಈ ಅಭಯಾರಣ್ಯ 117 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿದ್ದು, ಅಲ್ಲಿಂದ ಆಕಸ್ಮಿಕವಾಗಿ ಸಿಂಹಗಳು ತಪ್ಪಿಸಿಕೊಂಡಿವೆ. ಹೀಗೆ ತಪ್ಪಿಸಿಕೊಂಡ ಸಿಂಹಗಳು ಆಫ್ರಿಕಾದಲ್ಲಿಯೇ ಅತ್ಯಂತ ದೊಡ್ಡ ಸ್ಲಂ ಆಗಿರುವ ಕಿಬೆರಾ ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸುತ್ತಿವೆ.

ಊರೊಳಗೆ ಸಿಂಹಗಳು ಸಂಚರಿಸುತ್ತಿರುವುದರಿಂದ ಜನ ಭಯಭೀತರಾಗಿದ್ದು, ಅರಣ್ಯ ಇಲಾಖೆ ಹಾಗೂ ಸಫಾರಿಯ ಸಿಬ್ಬಂದಿ, ಸಿಂಹಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಭಯಾರಣ್ಯದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಎಷ್ಟು ಸಿಂಹಗಳು ತಪ್ಪಿಸಿಕೊಂಡಿವೆ ಎಂಬುದು ಗೊತ್ತಾಗಿಲ್ಲ. ಊರಿನಲ್ಲಿ ಅಲೆದಾಡುತ್ತಿರುವ ಸಿಂಹಗಳನ್ನು ಹಿಡಿಯಲು ಪ್ರಯತ್ನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...