alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಸದ ನಡುವೆಯೂ ಪರಸ್ಪರ ಭೇಟಿಯಾಗಿದ್ರಾ ಟ್ರಂಪ್ ಮತ್ತು ಕಿಮ್…?

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಕೆಲವು ದಿನಗಳಿಂದ ಪರಸ್ಪರರ ವಿರುದ್ದ ಕಿಡಿ ಕಾರುತ್ತಿದ್ದಾರೆ. ಇಂತವರು ಚಳಿಗಾಲದ ಒಲಂಪಿಕ್ಸ್ ನಲ್ಲಿ ಭೇಟಿಯಾಗಿದ್ದಾರೆ ಎಂದರೆ ನೀವು ನಂಬುತ್ತೀರಾ? ಏನದು ಸುದ್ದಿ ಎಂದು ತಿಳಿಯಲು ಇದನ್ನು ಓದಿ.

ಹೌದು ಟ್ರಂಪ್ ಮತ್ತು ಕಿಮ್ ಭೇಟಿಯಾಗಿರುವುದು ನಿಜ. ಆದರೆ ಇವರು ಒರಿಜಿನ್ ಗಳಲ್ಲ ಬದಲಾಗಿ ಡ್ಯೂಪ್ಲಿಕೇಟ್ ಗಳು. ಡೋನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ರನ್ನೇ ಹೋಲುವ ಇವರಿಬ್ಬರು ಪರಸ್ಪರ ಹಸ್ತಲಾಘವ ಮಾಡಿದ್ದಾರೆ. ಅಷ್ಟೇ ಅಲ್ಲ ಹೆಗಲ ಮೇಲೆ ಕೈ ಹಾಕಿಕೊಂಡು ಪೋಟೋಗೆ ಪೋಸ್ ಕೊಟ್ಟಿದ್ದಾರೆ.

ನಕಲಿ ಕಿಮ್ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯಾಗಿದ್ದು, ಹಾಂಕಾಂಗ್ ನಲ್ಲಿ ನೆಲೆಸಿದ್ದರೆ, ಡೋನಾಲ್ಡ್ ಟ್ರಂಪ್ ತದ್ರೂಪಿ ಡೆನಿಸ್ ಹ್ಯಾಲೆನ್ ಅಮೆರಿಕಾದವರಾಗಿದ್ದಾರೆ. ತಮ್ಮಿಬ್ಬರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಈ ತದ್ರೂಪಿಗಳು ಅಮೆರಿಕಾ ಹಾಗೂ ಉತ್ತರ ಕೊರಿಯಾದ ಸಂಘರ್ಷದಿಂದಾಗಿ ವಿಶ್ವದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ತಲೆದೋರಿದೆ. ತಮ್ಮಿಬ್ಬರ ಭೇಟಿಯ ರೀತಿಯಲ್ಲೇ ಡೋನಾಲ್ಡ್ ಟ್ರಂಪ್ ಹಾಗೂ ಕಿನ್ ಜಾಂಗ್ ಉನ್ ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ಸಂಘರ್ಷಕ್ಕೆ ಅಂತ್ಯವಾಡಬೇಕೆಂದು ಬಯಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...