alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನದ ಒತ್ತಡ ಬ್ಲಡ್ ಕ್ಯಾನ್ಸರ್ ಗೆ ದಾರಿಯಾಯ್ತು

ಒತ್ತಡ ಎಂಥ ಅಪಾಯಕಾರಿ ರೋಗಕ್ಕೆ ಆಹ್ವಾನ ನೀಡುತ್ತೆ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಮಹಿಳೆಯೊಬ್ಬಳ ಜೊತೆ ನಂಬಲಾಗದ ಘಟನೆ ನಡೆದಿದೆ.

32 ವರ್ಷದ ಕೇಟ್ ಸ್ಟೋಲರ್ಡ್ 18 ತಿಂಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ವಿಚ್ಛೇದನದ ನಂತ್ರ ಒಂಟಿಯಾಗಿ ಜೀವನ ನಡೆಸುವುದು ಕೇಟ್ ಗೆ ಸುಲಭವಾಗಿರಲಿಲ್ಲ. ಒತ್ತಡದಲ್ಲಿದ್ದ ಕೇಟ್ ಒಂದು ದಿನ ಬಾತ್ ರೂಂ ನಲ್ಲಿ ಬಿದ್ದಿದ್ದಾಳೆ. ವಿಚ್ಛೇದನದ ಒತ್ತಡದಲ್ಲಿ ಅನೇಕ ದಿನಗಳಿಂದ ತಲೆನೋವು ಅನುಭವಿಸುತ್ತಿದ್ದ ಕೇಟ್, ಬಾತ್ ರೂಮಿನಲ್ಲಿ ಬೀಳ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಿದ್ದಾಳೆ.

ಪರೀಕ್ಷೆ ವೇಳೆ ವೈದ್ಯರು ನೀಡಿದ ಸುದ್ದಿ ದಂಗಾಗಿಸುವಂತಿತ್ತು. ಒತ್ತಡದಲ್ಲಿರುವ ಕೇಟ್ ಗೆ ರಕ್ತ ಕ್ಯಾನ್ಸರ್ ಲಕ್ಷಣ ಕಂಡು ಬಂದಿತ್ತು. ತುರ್ತು ಚಿಕಿತ್ಸೆ ಸಿಕ್ಕಿಲ್ಲವೆಂದ್ರೆ ಮಹಿಳೆ 48 ಗಂಟೆಯಲ್ಲಿ ಸಾವನ್ನಪ್ಪುತ್ತಾಳೆಂದು ವೈದ್ಯರು ಹೇಳಿದ್ದರಂತೆ. ಆ ಕ್ಷಣದಲ್ಲಿಯೇ ವೈದ್ಯರು ಕಿಮೋಥೆರಪಿ ಮಾಡಿದ್ದರಂತೆ. ರೋಗನಿರೋಧಕ ವ್ಯವಸ್ಥೆ ದುರ್ಬಲವಾಗಿದೆ. ಆ ಸಂದರ್ಭದಲ್ಲಿ ಕೇಟ್ ಎಗ್ ತೆಗೆದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಇನ್ಮುಂದೆ ಕೇಟ್ ತಾಯಿಯಾಗಲು ಸಾಧ್ಯವಿಲ್ಲ.

2016ರಲ್ಲಿ ಆಸ್ಪತ್ರೆ ಸೇರಿದ್ದ ಕೇಟ್ 3 ತಿಂಗಳ ನಂತ್ರ ಮನೆಗೆ ಬಂದಿದ್ದಳು. 17 ವಾರಕ್ಕೊಮ್ಮೆ ಕಿಮೋಥೆರಪಿ ನಡೆಯುತ್ತಿತ್ತು. ಈಗ ಆಕೆ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಸದ್ಯ ಕೇಟ್ ಲ್ಯುಕೇಮಿಯಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...