alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲಿಲ್ಲದಿದ್ರೂ ಲಕ್ಷಾಂತರ ರೂ. ಗಳಿಸ್ತಾಳೆ ಈ ಹುಡುಗಿ

ಜೀವನದಲ್ಲಿ ಎಲ್ಲರಿಗೂ ಎಲ್ಲವೂ ಸಿಗಲು ಸಾಧ್ಯವಿಲ್ಲ. ಇದ್ದಿದ್ದರಲ್ಲಿಯೇ ಖುಷಿಪಡುವರರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಈ ಹುಡುಗಿ ಉತ್ತಮ ಉದಾಹರಣೆ. 2 ಕಾಲಿಲ್ಲದಿದ್ರೂ ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವ ಹುಡುಗಿ ಕೈ ತುಂಬಾ ಹಣ ಗಳಿಸ್ತಾಳೆ.

ಪೋರ್ಟ್ಲ್ಯಾಂಡ್ ನ 23 ವರ್ಷದ ಕನ್ಯಾ ಸೀಸರ್ ಸಾಧನೆ ಮಾಡ್ತಿರುವ ಹುಡುಗಿ. ಅಂಗಾಂಗಗಳು ಸರಿ ಇದ್ದು ವಿದ್ಯೆ ಇದ್ರೂ ದುಃಖದಲ್ಲಿ ಕಾಲ ಕಳೆಯುವವರ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಅವ್ರೆಲ್ಲರಿಗೂ ಸೀಸರ್ ಮಾದರಿ. ಕಾಲಿಲ್ಲದ ಹುಡುಗಿ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಇದ್ರಲ್ಲಿಯೇ ಸಾವಿರಾರು ಡಾಲರ್ ಗಳಿಸ್ತಾಳೆ.

ಸೀಸರ್ ಹುಟ್ಟಿದ್ದು ಥೈಲ್ಯಾಂಡ್ ನಲ್ಲಿ. ಕಾಲಿಲ್ಲದೆ ಜನಿಸಿದ ಮಗುವನ್ನು ಅಪ್ಪ-ಅಮ್ಮ ದೂರ ಮಾಡಿದ್ದರು. ಮಂದಿರದ ಬಳಿ ಸಿಕ್ಕ ಹುಡುಗಿಯನ್ನು ಪೋಟ್ಲ್ಯಾಂಡ್ ದಂಪತಿ ದತ್ತು ಪಡೆದಿದ್ದರು. ಬಾಲ್ಯದಲ್ಲಿಯೇ ಸೀಸರ್ ಗೆ ಗಾಲಿ ಕುರ್ಚಿ ತಂದುಕೊಟ್ಟಿದ್ದ ಪಾಲಕರು ಅತಿಯಾಗಿ ಮಗಳನ್ನು ಪ್ರೀತಿ ಮಾಡ್ತಿದ್ದರು.

ಸಾಧಿಸಿ ತೋರಿಸುವ ಛಲ ಹೊಂದಿದ್ದ ಸೀಸರ್ ಮಾಡಲಿಂಗ್ ಕ್ಷೇತ್ರ ಆಯ್ದುಕೊಂಡಳು. ಈಗ ಲಕ್ಷಾಂತರ ರೂಪಾಯಿ ಗಳಿಸುವ ಸೀಸರ್ ಈಜುವುದ್ರಲ್ಲೂ ಹಿಂದೆ ಬಿದ್ದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...