alex Certify
ಕನ್ನಡ ದುನಿಯಾ       Mobile App
       

Kannada Duniya

1,900 ಕಾಂಗರೂ ಹತ್ಯೆಗೆ ಕಾರಣ ಏನು ಗೊತ್ತಾ..?

kangaroo

ವನ್ಯಜೀವಿ ಪ್ರೇಮಿಗಳಿಗೊಂದು ಬೇಸರದ ಸಂಗತಿ. ಇಂದಿನಿಂದ ಆಸ್ಟ್ರೇಲಿಯಾ 1900 ಕಾಂಗರೂಗಳನ್ನು ಕೊಲ್ಲುವ ಕಾರ್ಯ ಶುರುಮಾಡಲಿದೆ. ಕಾಂಗರೂ ಸಂಖ್ಯೆ ಕಡಿಮೆಯಾಗಲಿ ಎನ್ನುವ ಕಾರಣಕ್ಕೆ ಈ ಕಾರ್ಯ ಮಾಡಲಾಗ್ತಾ ಇದೆ.

ವರದಿ ಪ್ರಕಾರ ಆಸ್ಟ್ರೇಲಿಯಾದಲ್ಲಿ ಕಾಂಗರೂಗಳ ಸಂಖ್ಯೆ ಜಾಸ್ತಿಯಾಗಿದೆ. ಇದು ಸರ್ಕಾರದ ಚಿಂತೆಗೆ ಕಾರಣವಾಗಿದೆ. ಇದು ಸ್ಥಳೀಯ ಪರಿಸರದ ಮೇಲೆ ಪರಿಣಾಮ ಬೀರುತ್ತಿದ್ದು, ಹಾಗಾಗಿ ಕಾಂಗರೂಗಳನ್ನು ಹತ್ಯೆ ಮಾಡಲು ಸರ್ಕಾರ ಮುಂದಾಗಿದೆ. ಶುಕ್ರವಾರ ಈ ಬಗ್ಗೆ ಅಧಿಕೃತ ಘೋಷಣೆಯಾಗಿದ್ದು, ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ ಸುತ್ತಮುತ್ತಲಿರುವ ಕಾಂಗರೂಗಳನ್ನು ಹತ್ಯೆಗೈಯಲು ನಿರ್ಧರಿಸಲಾಗಿದೆ.

ಕಾಂಗರೂಗಳ ಸಂಖ್ಯೆ ಗಣನೀಯವಾಗಿ ಏರ್ತಾ ಇರುವುದರಿಂದ ಪರಿಸರದಲ್ಲಿ ಅಸಮತೋಲನವುಂಟಾಗುತ್ತಿದೆ. ಹಸಿರು ನಾಶವಾಗ್ತಾ ಇದೆ. ಅನಿವಾರ್ಯವಾಗಿ ಕಾಂಗರೂ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ ಎಂದು ಎಸಿಟಿ ಸರ್ಕಾರ ಹೇಳಿದೆ. ಈ ಹಿಂದೆ ಕೂಡ ಕಾಂಗರೂಗಳನ್ನು ಕೊಲ್ಲುವ ಕಾರ್ಯ ನಡೆದಿತ್ತು. ಹಿಂದಿನ ಎರಡು ವರ್ಷ ಸುಮಾರು  4,000 ಕಾಂಗರೂಗಳನ್ನು ಕೊಲ್ಲಲಾಗಿತ್ತು. ಇಂದಿನಿಂದ 10 ಅಭಯಾರಣ್ಯಗಳಲ್ಲಿ ಕಾರ್ಯಾಚರಣೆ ಶುರುವಾಗಲಿದೆ. ಆಗಸ್ಟ್ ಕೊನೆಯವರೆಗೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...