alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಸ್ ಸೇರಿದ್ದ ಜರ್ಮನಿ ಬಾಲಕಿಯ ಹೊಸ ವರಸೆ

isis

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಸೇರಿದ್ದ ಜರ್ಮನಿಯ ಹುಡುಗಿಯೊಬ್ಬಳನ್ನು ಈಗ ಇರಾಕ್ ನಲ್ಲಿ  ಬಂಧಿಸಿಡಲಾಗಿದೆ. ಐಸಿಸ್ ಸೇರಿದ್ದಕ್ಕೆ ಪಶ್ಚಾತ್ತಾಪ ಪಡ್ತಾ ಇರೋ ಆಕೆ ಮನೆಗೆ ಹೋಗಬೇಕು ಅಂತಾ ಹಪಹಪಿಸುತ್ತಿದ್ದಾಳೆ.

ಕೆಲ ವರ್ಷಗಳ ಹಿಂದಷ್ಟೆ ಜರ್ಮನಿಯ ನಾಲ್ವರು ಮಹಿಳೆಯರು ಐಎಸ್ಐಎಸ್ ಸೇರಿದ್ದರು. ಪಲ್ಸ್ನಿಟ್ಜ್ ಎಂಬ ನಗರದ 16 ವರ್ಷದ ಬಾಲಕಿ ಕೂಡ ಐಸಿಸ್ ಗೆ ಸೇರ್ಪಡೆಗೊಂಡಿದ್ಲು. ಇರಾಕ್ ಜೈಲಿನಲ್ಲಿರೋ ಬಾಲಕಿ, ತನಗೆ ಶಸ್ತ್ರಾಸ್ತ್ರ, ಮದ್ದು ಗುಂಡು, ಬಾಂಬ್ ಗಳ ಸಹವಾಸ ಸಾಕು ಎನ್ನುತ್ತಿದ್ದಾಳೆ.

ಯುದ್ಧವನ್ನು ನೋಡಿ ಬೇಸತ್ತಿದ್ದು, ದಯವಿಟ್ಟು ಮನೆಗೆ ಕಳಿಸಿ ಅಂತಾ ಅಂಗಲಾಚಿದ್ದಾಳೆ. ಜರ್ಮನಿಗೆ ಗಡಿಪಾರು ಮಾಡಿ, ನೀವು ಹೇಳಿದಂತೆ ಕೇಳ್ತೀನಿ ಅಂತಾ ಅಧಿಕಾರಿಗಳನ್ನು ಬೇಡಿಕೊಂಡಿದ್ದಾಳೆ. ಬಾಲಕಿಯ ಎಡತೊಡೆ ಮತ್ತು ಬಲ ಮೊಣಕಾಲಿಗೆ ಹೆಲಿಕಾಪ್ಟರ್ ದಾಳಿಯಲ್ಲಿ ಗುಂಡು ಕೂಡ ತಗುಲಿದೆ.

ಇತ್ತೀಚೆಗಷ್ಟೆ ಐಸಿಸ್ ರಕ್ಕಸರಿಂದ ಮೋಸುಲ್ ನಗರವನ್ನು ವಶಪಡಿಸಿಕೊಂಡಿದ್ದ ಇರಾಕ್ ಸೇನೆ, ಆ ಸಂದರ್ಭದಲ್ಲಿ ಜರ್ಮನಿಯ ಈ ಬಾಲಕಿ ಸೇರಿದಂತೆ ಐವರನ್ನು ಬಂಧಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...