alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಪ್ರೇಮಿ ಪತಿಗೆ ನೀಡಬೇಕು 60 ಕೋಟಿ ಪರಿಹಾರ…!

ಮಹಿಳೆಯೊಬ್ಬಳು ಪತಿಯಿಂದ ದೂರವಾಗಿದ್ದಾಳೆ. ಪತ್ನಿ ಕಳೆದುಕೊಂಡ ಪತಿ ಕೋರ್ಟ್ ಮೊರೆ ಹೋಗಿ ಜಯ ಸಾಧಿಸಿದ್ದಾರೆ. ಬ್ರೇಕ್ ಅಪ್ ಗೆ ಕಾರಣವಾದ ಬಾಯ್ ಫ್ರೆಂಡ್ ಪತಿಗೆ ಪರಿಹಾರ ನೀಡಬೇಕಾಗಿದೆ. ಬಾಯ್ ಫ್ರೆಂಡ್ 60 ಕೋಟಿ 30 ಲಕ್ಷ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡಬೇಕಾಗಿದೆ. ಅಮೆರಿಕಾದ ಉತ್ತರ ಕೊರಾಲಿನಾದ ಕೋರ್ಟ್ ಈ ಆದೇಶ ನೀಡಿದೆ.

ಅಕ್ರಮ ಸಂಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಈ ರಾಜ್ಯದಲ್ಲಿ ವಿಶೇಷ ಕಾನೂನಿದೆ. ಕಾನೂನಿನ ಅಡಿಯಲ್ಲಿ ಕೋರ್ಟ್ ಮಹಿಳೆ ಪ್ರೇಮಿಗೆ ದಂಡ ವಿಧಿಸಿದೆ. ಕೇಥ್ ಕಿಂಗ್ ಹೆಸರಿನ ವ್ಯಕ್ತಿ, ಪತ್ನಿ ಡೇನಿಯಲ್ ಜೊತೆ ಬ್ರೇಕ್ ಅಪ್ ಆಗಲು ಆಕೆ ಬಾಯ್ ಫ್ರೆಂಡ್ ಫ್ರಾನ್ಸಿಸ್ಕೋ ಕಾರಣವೆಂದು ದೂರಿದ್ದ. ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ.

ಮಹಿಳೆ ಬಾಯ್ ಫ್ರೆಂಡ್ ಫ್ರಾನ್ಸಿಸ್ಕೋ ಸಂಪಾದನೆ 57 ಲಕ್ಷ ರೂಪಾಯಿ. ಆತ ಮಾರ್ಕೆಟಿಂಗ್ ಟೂರ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾನೆ. ಕೋರ್ಟ್ ಆದೇಶ ಪ್ರಶ್ನಿಸಿ ಆತ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಮಹಿಳೆ ವಿವಾಹೇತರ ಸಂಬಂಧದಿಂದ ಪತಿ ಕಂಪನಿಗೆ ಸಾಕಷ್ಟು ನಷ್ಟವಾಗಿದೆ. ಪತಿ ಕಂಪನಿಯಲ್ಲಿಯೇ ಪತ್ನಿ ಕೆಲಸ ಮಾಡ್ತಿದ್ದಳು ಎಂದು ವಕೀಲರು ಹೇಳಿದ್ದಾರೆ. ಇತ್ತ ಬಾಯ್ ಫ್ರೆಂಡ್ ಪರ ವಕೀಲರು, ಮಹಿಳೆ ಫಾನ್ಸಿಸ್ಕೋ ಭೇಟಿಯಾಗುವ ಮೊದಲೇ ಪತಿ-ಪತ್ನಿ ಮಧ್ಯೆ ಸಂಬಂಧ ಹಾಳಾಗಿತ್ತು ಎಂದು ತಮ್ಮ ವಾದ ಮಂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...