alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಸಾವು; ಜಾನ್ಸನ್ ಕಂಪನಿಗೆ ಭಾರೀ ದಂಡ

johnson

ಮಿಸ್ಸೋರಿ: ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಉತ್ಪನ್ನಗಳನ್ನು ಬಳಸಿದ ಮಹಿಳೆ ಕ್ಯಾನ್ಸರ್ ನಿಂದ ಮೃತಪಟ್ಟ ಕಾರಣ ಆಕೆಯ ಕುಟುಂಬಕ್ಕೆ ಭಾರೀ ಮೊತ್ತದ ಪರಿಹಾರ ನೀಡುವಂತೆ ಅಮೆರಿಕಾದ ಮಿಸ್ಸೋರಿ ನ್ಯಾಯಾಲಯ ಆದೇಶಿಸಿದೆ. ಹಲವು ವರ್ಷಗಳಿಂದ ಮಹಿಳೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಮೊದಲಾದ ಉತ್ಪನ್ನಗಳನ್ನು ಬಳಸಿದ್ದರಿಂದ ಅಂಡಾಶಯದ ಕ್ಯಾನ್ಸರ್ ನಿಂದ ಸಾವು ಕಂಡಿದ್ದರೆನ್ನಲಾಗಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮಿಸ್ಸೋರಿ ನ್ಯಾಯಾಲಯ 72 ಮಿಲಿಯನ್ ಡಾಲರ್ ಆಕೆಯ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಕಂಪನಿಗೆ ಆದೇಶಿಸಿದೆ. ಅಲಬಾಮಾದ ಬರ್ಮಿಂಗ್ ಹ್ಯಾಮ್ ನಿವಾಸಿ ಜಾಕ್ಲಿನ್ ಫಾಕ್ಸ್ ಎಂಬ ಮಹಿಳೆಯ ಕುಟುಂಬದವರು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.

ಸುಮಾರು 35 ವರ್ಷ ಆಕೆ ಜಾನ್ಸನ್ ಅಂಡ್ ಜಾನ್ಸನ್ ಉತ್ಪನ್ನಗಳನ್ನು ಬಳಸಿದ್ದರು. ಆಕೆಗೆ ಕ್ಯಾನ್ಸರ್ ಕಾಣಿಸಿಕೊಂಡು ಮೃತಪಟ್ಟಿದ್ದ ಕಾರಣ ಕುಟುಂಬದವರು ವಕೀಲರ ಮೂಲಕ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ವೈಜ್ಞಾನಿಕವಾದ ಸಾಕ್ಷ್ಯಗಳನ್ನು ಒದಗಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಮೃತ ಮಹಿಳೆಯ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...