alex Certify
ಕನ್ನಡ ದುನಿಯಾ       Mobile App
       

Kannada Duniya

19 ವರ್ಷಗಳ ನಂತ್ರ ಹಾಸಿಗೆ ಕೆಳಗೆ ಸಿಕ್ತು ಈ ವಸ್ತು…!

ಹಳೆಯ ವಸ್ತು ಸಿಕ್ಕಾಗ ಆಶ್ಚರ್ಯದ ಜೊತೆ ಸಂತೋಷವಾಗುತ್ತೆ. ಅನೇಕ ವರ್ಷಗಳಿಂದ ಮರೆತು ಹೋಗಿದ್ದ ವಸ್ತು ಅಥವಾ ಫೋಟೋ ಸಿಕ್ಕಾಗ ಹಳೆ ನೆನಪಿನ ಜೊತೆಯಾಗುವ ಖುಷಿಯನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಗ್ರೀನ್ಸ್ಬರೋ ನಗರದ ಜಾನ್ ವಾಕರ್ ಜೊತೆಯೂ ಇಂಥಹದ್ದೇ ಘಟನೆ ನಡೆದಿದೆ.

19 ವರ್ಷಗಳ ಹಿಂದೆ ಜಾನ್ ವಾಕರ್ ಮದುವೆಯೊಂದಕ್ಕೆ ಹೋಗಲು ವಿಮಾನ ಟಿಕೆಟ್ ಬುಕ್ ಮಾಡಿದ್ದ. ಮದುವೆಗೆ ಹೋಗಲು ಸಾಧ್ಯವಾಗಿರಲಿಲ್ಲ. ವಿಮಾನ ಕಂಪನಿಗೆ ಪತ್ರ ಬರೆದು ಹಣ ವಾಪಸ್ ನೀಡುವಂತೆ ಕೇಳಿದ್ದ. ಆದ್ರೆ ಕಂಪನಿ ಹಣವನ್ನು ವಾಪಸ್ ಮಾಡಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಈ ಟಿಕೆಟ್ ಬಳಸಿಕೊಳ್ಳಿ ಎಂದಿತ್ತು.

1999 ಜನವರಿ 2ರಂದು ಹೋಗಬೇಕಿದ್ದ ಮದುವೆಗೆ ಜಾನ್ ಡಿಸೆಂಬರ್ 31,1998 ರಂದು ವಿಮಾನ ಟಿಕೆಟ್ ಬುಕ್ ಮಾಡಿದ್ದ. ಕೆಲ ದಿನಗಳ ಹಿಂದೆ ಹಾಸಿಗೆ ಸ್ವಚ್ಛಗೊಳಿಸುವ ವೇಳೆ ಜಾನ್ ಗೆ ಒಂದು ಕವರ್ ಸಿಕ್ಕಿದೆ. ಅದ್ರಲ್ಲಿ ಟಿಕೆಟ್ ಹಾಗೂ ಲೆಟರ್ ನೋಡಿ ಜಾನ್ ಆಶ್ಚರ್ಯಗೊಂಡಿದ್ದಾನೆ. ಹಳೆ ಟಿಕೆಟ್ ಇದೆ ಪ್ರಯಾಣ ಬೆಳೆಸಬಹುದಾ ಎಂದು ವಿಮಾನ ಕಂಪನಿಗೆ ಕರೆ ಮಾಡಿ ಕೇಳಿದ್ದಾನೆ. ಅಲ್ಲಿಂದ ಸರಿಯಾದ ಉತ್ತರ ಬರಲಿಲ್ಲ. ನಂತ್ರ ಜಾನ್ ಟ್ವೀಟರ್ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾನೆ.

9/11ರ ಘಟನೆ ಉದ್ಯಮದ ಮೇಲೆ ಪರಿಣಾಮ ಬೀರಿತ್ತು. 2002ರಲ್ಲಿ ಕಂಪನಿ ದಿವಾಳಿಯಾಗಿದೆ. ಹಾಗಾಗಿ ನಿಮ್ಮ ಟಿಕೆಟ್ ಗೆ ಯಾವುದೇ ಮಾನ್ಯತೆಯಿಲ್ಲ. ಆದ್ರೆ 19 ವರ್ಷಗಳ ಹಳೆ ಟಿಕೆಟ್ ನಿಮ್ಮ ಕೈನಲ್ಲಿರುವುದ್ರಿಂದ ನಿಮಗೆ ಗೌರವಿಸುವ ಪ್ರಯತ್ನ ಮಾಡ್ತೇವೆ. ಈ ಟಿಕೆಟ್ ನಲ್ಲಿ ನೀವು ಪ್ರಯಾಣ ಬೆಳೆಸಬಹುದೆಂದು ವಿಮಾನ ಕಂಪನಿ ಹೇಳಿದೆ. ಆಗ 378 ಡಾಲರ್ ಇದ್ದ ಟಿಕೆಟ್ ಬೆಲೆ ಈಗ  571 ಡಾಲರ್ ಆಗಿದೆ. 36 ಸಾವಿರದ 283 ರೂಪಾಯಿ ಬೆಲೆಯ ಟಿಕೆಟ್ ನಲ್ಲಿ ಎಲ್ಲಿಗೆ ಪ್ರಯಾಣ ಬೆಳೆಸಬೇಕೆಂದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಜಾನ್ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...