alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ಕ್ಷಣದಲ್ಲಿ ಬದಲಾಯ್ತು ನಿರುದ್ಯೋಗಿ ಯುವಕನ ಅದೃಷ್ಟ

ಕೆಲಸ ಅರಸಿಕೊಂಡು ವಿದೇಶಕ್ಕೆ ತೆರಳಿದ್ದ ಯುವಕ ಇನ್ನೇನು ಅಲ್ಲಿ ಕೆಲಸ ಸಿಗುವುದಿಲ್ಲ ಎಂದು ತಿಳಿದು ನಿರಾಸೆಯಿಂದ ಮರಳಿ ದೇಶದತ್ತ ಮುಖ ಮಾಡಿದ್ದ. ಕೊನೆಯದಾಗಿ ತನ್ನ ಅದೃಷ್ಟ ಪರೀಕ್ಷಿಸಲು ಲಾಟರಿ ಖರೀದಿ ಮಾಡಿದ್ದು, ಈಗ ಒಂದೇ ರಾತ್ರಿಯಲ್ಲಿ ಆತನ ನಸೀಬು​ ಬದಲಾಗಿದೆ.

ಎಸ್​….ದುಬೈನಲ್ಲಿ ನೆಲೆಸಿದ್ದ ಕೇರಳ ಮೂಲದ ತೋಜೊ ಮ್ಯಾಥ್ಯೂ, ದುಬೈ ಬಿಡುವ ಕೆಲವೇ ಗಂಟೆಗಳ ಮುನ್ನ ಒಂದು ಲಾಟರಿ ಖರೀದಿಸಿದ್ದರು. ಆ ಲಾಟರಿ ತೆಗೆದುಕೊಂಡ ಗಳಿಗೆ ಚೆನ್ನಾಗಿತ್ತು ಅಂತ ಕಾಣುತ್ತೆ. ಮ್ಯಾಥ್ಯೂಗೆ ಬಂಪರ್​​ ಹೊಡೆದಿದೆ. ಅಂದ ಹಾಗೆ ದುಬೈ ಕರೆನ್ಸಿಯ ಅನುಸಾರ 19 ಲಕ್ಷ ಡಾಲರ್​ (ಸುಮಾರು 13 ಕೋಟಿ) ಬಹುಮಾನ ಬಂದಿದೆ.

ಮ್ಯಾಥ್ಯೂ ಹೇಳುವಂತೆ, ಭಾರತಕ್ಕೆ ಫ್ಲೈಟ್​ ಹತ್ತುವ ಮುನ್ನ ಅಂದ್ರೆ, ಜೂನ್​ 24 ರಂದು ದುಬೈ ವಿಮಾನ ನಿಲ್ದಾಣದಲ್ಲಿ ಈ ಲಾಟರಿ ಖರೀದಿಸಿದ್ದೆ. ನನಗೆ ದೆಹಲಿಯಲ್ಲಿ ಕೆಲಸ ಸಿಕ್ಕಿತ್ತು. ಈ ಕಾರಣದಿಂದ ನಾನು ತವರಿಗೆ ತೆರಳಲು ಸಜ್ಜಾಗಿದ್ದೆ. ನನಗೆ ಕೋಟಿಯ ಲಾಟ್ರಿ ಬಂದಿರೋದು ನಂಬಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಈ ಮೊದಲು ಭಾರತೀಯ ಮೂಲದ ಚಾಲಕನಿಗೆ ಕಳೆದ ಏಪ್ರಿಲ್​​ನಲ್ಲಿ ಬಂಪರ್​ ಮೊತ್ತ ಲಭಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...