alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಮಾಡದೇ 6 ವರ್ಷ ಸಂಬಳ ಪಡೆದ ಭೂಪ

office

ಮ್ಯಾಡ್ರಿಡ್: ಒಂದೇ ಒಂದು ದಿನ ರಜೆ ಹಾಕಿದರೆ ಸಾಕು, ಮಾರನೇ ದಿನ ಕೆಲಸಕ್ಕೆ ಬಂದಾಗ, ನಿನ್ನೆ ಎಲ್ಲಿಗೆ ಹೋಗಿದ್ದೇ? ಯಾಕೆ ಕೆಲಸಕ್ಕೆ ಬಂದಿರಲಿಲ್ಲ? ಎಂದೆಲ್ಲಾ ಪ್ರಶ್ನೆಗಳು ಎದುರಾಗುತ್ತವೆ. ಆದರೆ, ಬರೋಬ್ಬರಿ 6 ವರ್ಷಗಳಿಂದ ಕೆಲಸಕ್ಕೆ ಬಾರದೆ ವೇತನ ಪಡೆದ ಭೂಪನೊಬ್ಬನ ಸ್ಟೋರಿ ಇಲ್ಲಿದೆ ನೋಡಿ.

ಸ್ಪೇನ್ ದೇಶದ ಕಾಡಿಜ್ ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜಾಕ್ವಿನ್ ಗಾರ್ಸಿಯಾ ಸುಮಾರು 6 ವರ್ಷಗಳಿಂದ ಕೆಲಸಕ್ಕೆ ಗೈರುಹಾಜರಾಗಿದ್ದಾನೆ. ಆತ ಗೈರು ಹಾಜರಾಗಿದ್ದರೂ ಪ್ರತಿ ತಿಂಗಳು ಆತನ ಖಾತೆಗೆ ವೇತನ ಜಮಾ ಆಗಿದೆ. ಮಾತ್ರವಲ್ಲ, ಆತ ಗೈರು ಹಾಜರಾಗಿರುವುದು ಆಡಳಿತಾಧಿಕಾರಿಗಳಿಗೆ ಗೊತ್ತೇ ಆಗಿರಲಿಲ್ಲ. ನೀರು ಸರಬರಾಜು ವಿಭಾಗದಲ್ಲಿ ಇಂಜಿನಿಯರ್ ಆಗಿದ್ದ ಜಾಕ್ವಿನ್ ಗಾರ್ಸಿಯಾ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡದೇ ಪುಸ್ತಕ ಓದುತ್ತಿದ್ದರು.

ಇವರು ಸಬ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಡ್ ಆಫೀಸ್ ನವರು, ಹೆಡ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಬ್ ಆಫೀಸ್ ನವರು ಭಾವಿಸಿದ್ದರು. ಆದರೆ, ಕೆಲಸವನ್ನೇ ಮಾಡದೇ ಈ ಭೂಪ ಸಂಬಳ ಎಣಿಸಿಕೊಂಡಿದ್ದಾನೆ. ಕೊನೆಗೆ ಅತಿಹೆಚ್ಚು ಸೇವೆ ಸಲ್ಲಿಸಿದ ನಿವೃತ್ತರಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ದಾಖಲೆ ಪರಿಶೀಲಿಸಿದಾಗ ಈತ ಗೈರು ಹಾಜರಾಗಿರುವುದು ಬೆಳಕಿಗೆ ಬಂದಿದೆ. ಇದೀಗ ಆತನ ವಿರುದ್ಧ ಕಾನೂನು ಕ್ರಮಕ್ಕೆ ಸ್ಥಳೀಯ ಸಂಸ್ಥೆ ಮುಂದಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...