alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗದಾಸೆಗೆ ಮಲೇಶಿಯಾಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ ಯುವಕರು

ಕೆಲಸದಾಸೆಗೆ ಹೈದರಾಬಾದ್ ಮೂಲದ ಐವರು ಮಲೇಷ್ಯಾಗೆ ಹೋಗಿದ್ದ ಯುವಕರು, ಇದೀಗ ವಿದೇಶಾಂಗ ಸಚಿವಾಲಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಹೈದರಾಬಾದ್ ಮೂಲದ ಎರಡು ಸಂಸ್ಥೆಗಳು, ಉತ್ತಮ‌ ಸಂಬಳವಿರುವ ಉದ್ಯೋಗ ಕೊಡಿಸುವುದಾಗಿ ಐವರಿಂದ ಒಂದು ಲಕ್ಷ ಪಡೆದು ಮಲೇಷ್ಯಾಗೆ ಕಳುಹಿಸಿದ್ದಾರೆ‌. ಆದರೀಗ ಮಲೇಷ್ಯಾದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಐವರ ಪೋಷಕರು ಆರೋಪಿಸಿದ್ದು, ತಮ್ಮ ಮಕ್ಕಳನ್ನು ವಾಪಾಸು ಬರುವುದಕ್ಕೆ ಅವಕಾಶ ಕೊಡುಸುವಂತೆ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ.

ಮಲೇಷ್ಯಾದಲ್ಲಿನ ಅವನಿ ಸೆಪಾಂಗ್ ಗೋಲ್ಡ್ ಕೋಸ್ಟ್ ಹಾಗೂ ಸಾರಾ ಮುಂಬಯಿ ಟೈಲರಿಂಗ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಹೇಳಲಾಗಿತ್ತು‌. ಆದರೆ ಕೆಲಸಕ್ಕೆ‌ ಹೋದ ಬಳಿಕ ಕೆಟ್ಟದಾಗಿರುವ ವಸತಿಗೃಹ ಹಾಗೂ ಭರವಸೆ ನೀಡಿದಷ್ಟು ಸಂಬಳ‌ ಕೊಡುತ್ತಿಲ್ಲ. ಭಾರತಕ್ಕೆ ವಾಪಾಸು ಹೋಗಲು‌ ಬಿಡುತ್ತಿಲ್ಲ ಎಂದು ಯುವಕರು ಪೋಷಕರ ಬಳಿ ಅಳಲು‌ ತೋಡಿಕೊಂಡಿರುವುದರಿಂದ, ಸಹಾಯಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ‌‌.

ಯುಕ್ತಾಪುರದಲ್ಲಿರುವ ಯೂಸಫ್ ಹಬೀಬ್ ಹಾಗೂ ಸಿಕಂದರಬಾದ್ ನ ರಮಣ ಏಜೆನ್ಸಿ ಮೂಲಕ‌, ಬಹದ್ದೂರ್ ಪುರದ ಮಹಮ್ಮದ್ ಹಯಾತ್, ಮೊಹಮ್ಮದ್ ಅಜಾರ್ ಮೊಯಿದ್ದೀನ್, ಯುಕ್ತಾಪುರದ ಮೊಹಮ್ಮದ್ ನಯೀಮುದ್ದ್ ಹಾಗೂ ಪುರಾನಪುರದ ಮೊಹಮ್ಮದ್ ತಾಹೀರ್ ಹಾಗೂ ನದೀಂ ಎನ್ನುವ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...