alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಹಾರಾಟದಲ್ಲೇ ನಿದ್ದೆಗೆ ಜಾರಿದ್ದ ಪೈಲಟ್

jet

ಎತ್ತರದ ಪ್ರದೇಶದಲ್ಲಿ ವಿಮಾನ ಹಾರಾಟದಲ್ಲಿದ್ದಾಗಲೇ, ಪೈಲಟ್ ಗಳು ಮಾಡಿದ ಯಡವಟ್ಟಿಗೆ ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ ವರದಿಯಾಗಿದೆ.

ಮುಂಬೈನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಜೆಟ್ ಏರ್ ವೇಸ್ ವಿಮಾನ, ಚೆಕ್ ಗಣರಾಜ್ಯದ ವೈಮಾನಿಕ ಪ್ರದೇಶದಲ್ಲಿ ಹಾರಾಟ ನಡೆಸುವಾಗ, ಪೈಲಟ್ ನಿದ್ದೆಗೆ ಜಾರಿದ್ದಾನೆ.

ಮತ್ತೊಬ್ಬ ಪೈಲಟ್ ಎ.ಟಿ.ಸಿ. ಸಂಪರ್ಕ ಕಳೆದುಕೊಂಡಿದ್ದಾನೆ. ಇದರಿಂದಾಗಿ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.

9 W 118 ಜೆಟ್ ಏರ್ ವೇಸ್ ವಿಮಾನದಲ್ಲಿ 330 ಪ್ರಯಾಣಿಕರು, 15 ಸಿಬ್ಬಂದಿಯಿದ್ದರು. ಜರ್ಮನಿಯನ್ನು ಪ್ರವೇಶಿಸುವ ಮೊದಲು ಸುಮಾರು 33 ನಿಮಿಷಗಳ ಕಾಲ, ಬ್ರಿಸಲ್ ವಾದಿಂದ ಪ್ರಾಗ್ಯೂವರೆಗೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು.

ಜರ್ಮಿನಿಯ ಸಮೀಪ ವಿಮಾನ ಸಂಪರ್ಕ ಪಡೆದುಕೊಂಡ ಬಳಿಕ ಜರ್ಮನ್ ವಿಮಾನಗಳು ಅದನ್ನು ಹಿಂಬಾಲಿಸಿವೆ. ತಾಂತ್ರಿಕ ಸಮಸ್ಯೆ ಸರಿಪಡಿಸಿದ ನಂತರ ಪ್ರಯಾಣ ಮುಂದುವರೆದಿದೆ. ಈ ಘಟನೆಗೆ ಪೈಲಟ್ ನಿದ್ದೆಗೆ ಜಾರಿದ್ದು, ಮತ್ತೊಬ್ಬ ದಿಢೀರ್ ಆಗಿ ಎ.ಟಿ.ಸಿ. ಸಂಪರ್ಕ ಕಳೆದುಕೊಂಡಿದ್ದೇ ಕಾರಣ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...