alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಕ್ ಪಿಟ್ ನಲ್ಲೇ ಪ್ರೇಮಿಗಳ ಕಲಹ, ಆತಂಕಗೊಂಡ ಪ್ರಯಾಣಿಕರು

ಹಾರಾಟದಲ್ಲಿದ್ದ ವಿಮಾನದಲ್ಲಿ ಪ್ರೇಮಿಗಳಾಗಿರುವ ಪೈಲಟ್, ಸಹ ಪೈಲಟ್ ಜಗಳವಾಡಿಕೊಂಡಿದ್ದು, ಕೆಲಕಾಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಆತಂಕಗೊಂಡ ಘಟನೆ ನಡೆದಿದೆ.

ಜನವರಿ 1 ರಂದು ಲಂಡನ್ ನಿಂದ ಮುಂಬಯಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಇಂತಹುದೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ.

ಪ್ರೇಮಿಗಳು ಖಾಸಗಿ ವಿಚಾರಕ್ಕೆ ಜಗಳವಾಡಿಕೊಂಡಿದ್ದು, ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರದಲ್ಲಿ ಪರಿಸ್ಥಿತಿ ತಿಳಿಯಾಗಿ ಪೈಲಟ್ ಸುರಕ್ಷಿತವಾಗಿ ಮುಂಬೈನಲ್ಲಿ ವಿಮಾನವನ್ನು ಇಳಿಸಿದ್ದು, ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.

ಜೆಟ್ ಏರ್ ವೇಸ್ ಬೋಯಿಂಗ್ 777 ವಿಮಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೈಲಟ್ ಮತ್ತು ಮಹಿಳಾ ಸಹ ಪೈಲಟ್ ಪ್ರೀತಿಸುತ್ತಿದ್ದಾರೆ. ಲಂಡನ್ ನಿಂದ ವಿಮಾನ ಹೊರಟ ಕೆಲ ಕ್ಷಣದಲ್ಲೇ ಇಬ್ಬರ ನಡುವೆ ಜಗಳವಾಗಿ ಪೈಲಟ್ ಆಕೆಗೆ ಹೊಡೆದಿದ್ದಾನೆ.

ಆಕೆ ಅಳುತ್ತಾ ಕಾಕ್ ಪಿಟ್ ನಿಂದ ಹೊರಗೆ ಬಂದಿದ್ದು, ವಿಮಾನದಲ್ಲಿದ್ದ ಸಿಬ್ಬಂದಿ, ಪ್ರಯಾಣಿಕರು ಆತಂಕಗೊಂಡಿದ್ದಾರೆ. ಆಕೆಯನ್ನು ಸಮಾಧಾನಪಡಿಸಿ ಕಾಕ್ ಪಿಟ್ ಗೆ ಕಳಿಸಿದ್ದು, ಮತ್ತೆ ಜಗಳವಾಡಿಕೊಂಡು ಆಕೆ ಹೊರಗೆ ಬಂದಿದ್ದಾಳೆ. ಕೊನೆಗೆ ವಿಮಾನದಲ್ಲಿದ್ದವರ ಆತಂಕವನ್ನು ಗಮನಿಸಿ, ಆಕೆ ಕಾಕ್ ಪಿಟ್ ಗೆ ತೆರಳಿ ಕೆಲಸ ನಿರ್ವಹಿಸಿದ್ದಾಳೆ.

ವಿಮಾನ ಮುಂಬೈನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ವಿಮಾನದಲ್ಲಿ 324 ಪ್ರಯಾಣಿಕರು, 14 ಸಿಬ್ಬಂದಿ ಇದ್ದರು. ಜೆಟ್ ಏರ್ ವೇಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಕೂಡ ಕ್ರಮ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...