alex Certify
ಕನ್ನಡ ದುನಿಯಾ       Mobile App
       

Kannada Duniya

ಯಹೂದಿಗಳ ಪವಿತ್ರ ಸ್ಥಳದಲ್ಲಿ ಬೆತ್ತಲೆ ಫೋಟೋ ತೆಗೆಸಿಕೊಂಡ ಮಾಡೆಲ್

ಪವಿತ್ರ ಸ್ಥಳ ಜೆರುಸಲೆಂನಲ್ಲಿ ಮಾಡೆಲ್ ಒಬ್ಬಳ ಬೋಲ್ಡ್ ಫೋಟೋ ಶೂಟ್ ವಿವಾದಕ್ಕೆ ಕಾರಣವಾಗಿದೆ. ಬೆಲ್ಜೀರಿಯಾದ ಮಾಡೆಲ್ ಒಬ್ಬಳು ಜೆರುಸಲೆಂನ ಪವಿತ್ರ ಗೋಡೆಯ ಮುಂದೆ ನ್ಯೂಡ್ ಫೋಟೋ ಶೂಟ್ ಮಾಡಿಸಿದ್ದಾಳೆ. ಯಹೂದಿ ಸಮುದಾಯ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಧಾರ್ಮಿಕ ದ್ವೇಷವೆಂದು ಯಹೂದಿಗಳು ಹರಿಹಾಯ್ದಿದ್ದಾರೆ.

ಮಾಡೆಲ್ ಮೆರಿಸಾ ಪಾಪೇನ್ ಜೆರುಸಲೆಂಗೆ ಭೇಟಿ ನೀಡಿದ್ದ ಎಲ್ಲ ಫೋಟೋಗಳನ್ನು ತನ್ನ ವೆಬ್ಸೈಟ್ ನಲ್ಲಿ ಹಂಚಿಕೊಂಡಿದ್ದಾಳೆ. ಪಶ್ಚಿಮ ಗೋಡೆ ಕಡೆ ನೋಡುತ್ತ ನಿಂತಿರುವ ನ್ಯೂಡ್ ಫೋಟೋವೊಂದನ್ನೂ ಮಾಡೆಲ್ ಹಾಕಿದ್ದಾಳೆ. ಇನ್ನೊಂದು ಫೋಟೋದಲ್ಲಿ ಇಸ್ರೇಲ್ ಧ್ವಜವನ್ನು ಹೊದ್ದುಕೊಂಡಿದ್ದಾಳೆ. ಗೋಡೆ ಮುಂದೆ ನಿಂತು ತೆಗೆಸಿರುವ ಫೋಟೋಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಯಹೂದಿಗಳ ಪವಿತ್ರ ಗೋಡೆ ಇದಾಗಿದ್ದು, ಇದ್ರ ಮುಂದೆ ಅವ್ರು ಪ್ರಾರ್ಥನೆ ಮಾಡ್ತಾರೆ. ಜೆರುಸೆಲಂ ಯಹೂದಿ, ಮುಸ್ಲೀಂ, ಕ್ರೈಸ್ತರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ. ಮಾಡೆಲ್ ಫೋಟೋಕ್ಕೆ ಜನರು ಕಮೆಂಟ್ ಮಾಡ್ತಿದ್ದಾರೆ. ಮಾಡೆಲ್ ನಡೆ ದುರುದ್ದೇಶಪೂರಿತವಾಗಿದೆ ಎಂದು ಕಿಡಿಕಾರಿದ್ದಾರೆ.

ಮೆರಿಸಾ ವಿವಾದಕ್ಕೆ ಒಳಗಾಗಿದ್ದು, ಇದೇ ಮೊದಲಲ್ಲ. ಈ ಹಿಂದೆ ಈಜಿಪ್ಟ್ ನ ಪ್ರಾಚೀನ ದೇವಾಲಯದಲ್ಲಿ ನ್ಯೂಡ್ ಫೋಟೋಶೂಟ್ ಮಾಡಿ ಬಂಧನಕ್ಕೊಳಗಾಗಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...