alex Certify
ಕನ್ನಡ ದುನಿಯಾ       Mobile App
       

Kannada Duniya

ಅಡ್ಡ ಬಂದವನನ್ನು ತಡೆದು ಮಾತು ಮುಂದುವರೆಸಿದ ವರದಿಗಾರ್ತಿ

ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಗಳಿಗೆ ಇದು ಸಾಮಾನ್ಯ. ಕ್ಯಾಮರಾದಲ್ಲಿ ಏನ್ ಇದೆ ಅನ್ನೋದು ನೋಡೋದೇ ಮುಂದೆ ನಿಂತವರಿಗೆ ದೊಡ್ಡ ಕುತೂಹಲ. ಪಿಟಿಸಿ ಕೊಡುವಾಗ ಅಡ್ಡ ಬಂದ್ರೇ ಏನ್ ಆಗುತ್ತೆ ಗೊತ್ತಾ?

ಇಲ್ಲೊಂದು ವಿಡಿಯೋ ಇದೆ ನೋಡಿಬಿಡಿ. ಅಮೆರಿಕಾದಲ್ಲಿ ನಡೆದ ಘಟನೆ ಇದು. ನ್ಯೂಯಾರ್ಕ್ ಸಿಟಿ ಬಂದರು ಪ್ರಾಧಿಕಾರದ ಮುಂದೆ ನಿಂತ ಎಲೆಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿಯೊಬ್ಬಳು, ಅಪಘಾತದ ಬಗ್ಗೆ ವರದಿ ಮಾಡುತ್ತಿದ್ದಳು.

ಅಪಘಾತ ಕುರಿತು ಪಿಟಿಸಿ ಕೊಡುತ್ತಿದ್ದಾಗ ಕ್ಯಾಮರಾ ಮತ್ತು ರಿಪೋರ್ಟರ್ ನಡುವೆ ಏಕಾಏಕಿ ಒಬ್ಬ ಅತಿಥಿ ಕರೆಯದೇ ಬಂದು ಬಿಟ್ಟ. ಆಗ ಆ ವರದಿಗಾರ್ತಿ ತನ್ನ ಕೈಯಿಂದ ತಡೆದಿದ್ದಾಳೆ. ಆ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಅದೇ ಹೊತ್ತಿನಲ್ಲಿ ತಾನು ಹೇಳಬೇಕು ಅಂಥ ನಿರ್ಧರಿಸಿದ್ದನ್ನು ಆ ವರದಿಗಾರ್ತಿ ಹೇಳಿ ಮುಗಿಸಿದಳು.

ಇದನ್ನು ಸೆರೆ ಹಿಡಿದ ಪ್ರತ್ಯಕ್ಷದರ್ಶಿಯೊಬ್ಬ, ಟ್ವೀಟರ್ ನಲ್ಲಿ ಹಾಕಿ, ಇದಕ್ಕಾಗಿಯೇ ನಾವು ‘ಡಾರ್ಲಾ ಮೈಲ್ಸ್ ಸ್ಮೂತ್’ ಳನ್ನು ಇಷ್ಟ ಪಡುವುದು ಅಂಥ ಬರೆದುಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...