alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲುಣಿಸುತ್ತಿದ್ದ ಪತ್ನಿ ಮೇಲೆಯೇ ಅಮಾನುಷ ವರ್ತನೆ

nikolas

ವಾಷಿಂಗ್ಟನ್: ಮಕ್ಕಳಿರಲವ್ವ ಮನೆ ತುಂಬ ಎನ್ನುತ್ತಾರೆ. ಮನೆತುಂಬ ಮಕ್ಕಳಿದ್ದರೆ, ಮನೆಯಲ್ಲಿ ಸದಾಕಾಲ ಕಿಲಕಿಲ ಸದ್ದು, ಸಂತೋಷ ಇರುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿರಲಿ, ಇರುವ ಒಂದು ಮಗುವೇ ಬೇಡವೆಂದ ಗಂಡನೊಬ್ಬ ಮಾಡಿದ ಅಮಾನವೀಯ ಕೃತ್ಯದ ವರದಿಯೊಂದು ಇಲ್ಲಿದೆ ನೋಡಿ.

ಅಮೆರಿಕದಲ್ಲಿ ನಿಕೋಲಸ್ ಜಾರ್ಜ್ ಲೇಹ್ ಮೀರ್ ಎಂಬಾತ ತನ್ನ 4 ತಿಂಗಳ ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪತ್ನಿ ಯಾವಾಗಲೂ ಮಗುವಿನ ಜೊತೆಯಲ್ಲಿಯೇ ಕಾಲ ಕಳೆಯುತ್ತಾಳೆ. ನನ್ನ ಜೊತೆಗೆ ಇರುವುದೇ ಇಲ್ಲ ಎಂಬ ಅಸಮಾಧಾನ ಈತನದು. ಮನೆಗೆ ಮಗು ಬಂದಿದ್ದು, ಖುಷಿ ತರುವ ಬದಲು ಈತನಿಗೆ ಅಸಮಾಧಾನ ತಂದಿದೆ. ಹೀಗೆ ಮಗುವಿನ ಆಗಮನದಿಂದ ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ ಕೂಡ ಇರುತ್ತದೆ. ಕೆಲವೊಂದು ಪ್ರಕರಣದಲ್ಲಿ ಪತಿ, ಪತ್ನಿ ದೂರ ಕೂಡ ಆಗಿದ್ದಾರೆ.

ಇಂತಹ ಪ್ರಕರಣಗಳನ್ನು ನ್ಯೂ ಪೇರೆಂಟ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ನಿಕೋಲಸ್ ಜಾರ್ಜ್, ಪತ್ನಿ ಯಾವಾಗಲೂ ಮಗು ಜೊತೆಗೇ ಇರುತ್ತಾಳೆ ನನ್ನನ್ನು ನಿರ್ಲಕ್ಷಿಸಿದ್ದಾಳೆ ಎಂದು ಭಾವಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪತ್ನಿಯನ್ನೇ ಕೊಲ್ಲಲು ಪ್ರಯತ್ನಿಸಿದ್ದಾನೆ. ಈತನ ಕಿರುಕುಳದಿಂದ ಬೇಸತ್ತ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಈತ ಕಳೆದ 10 ವರ್ಷಗಳಿಂದ ನನಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. ಅದನ್ನು ಸಹಿಸಿಕೊಂಡಿದ್ದೆ. ಈತನಿಂದ ಅಂತರ ಕಾಯ್ದುಕೊಂಡಿದ್ದೆ. ಒಮ್ಮೆ ಕೊಲೆ ಮಾಡಲು ಗನ್ ತೆಗೆದುಕೊಂಡಿದ್ದ. ಈಗ ಮಗುವನ್ನೇ ದ್ವೇಷಿಸುತ್ತಿದ್ದು, ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ಆತನ ಪತ್ನಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಆರೋಪ ಸಾಬೀತಾದರೆ ಆತನಿಗೆ 7 ವರ್ಷ ಶಿಕ್ಷೆಯಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...