alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದ ಭದ್ರತೆ ಜವಾಬ್ದಾರಿ ಹೊತ್ತ ಮುಸ್ಲಿಂ

javedಪುಣೆಯ ಲೋನಾವಾಲಾದಲ್ಲಿ ಹುಟ್ಟಿದ ಲೆ. ಜಾವೆದ್ ಖಾನ್ ಈಗ ಅಮೆರಿಕ ನಿವಾಸಿ. ಇಂಡಿಯಾನಾ ಪೊಲೀಸ್ ನಲ್ಲಿ ಕೆಲಸ ಮಾಡುತ್ತಿದ್ದು, ಅಮೆರಿಕದ ಅತಿ ದೊಡ್ಡ ಹಿಂದೂ ದೇವಾಲಯದಲ್ಲಿ ಸೆಕ್ಯುರಿಟಿಯಾಗಿದ್ದಾರೆ. ಮುಸ್ಲಿಂ ಆಗಿ ಹಿಂದೂ ದೇವಾಲಯದ ಭದ್ರತೆಯ ಜವಾಬ್ದಾರಿ ಹೊತ್ತಿರುವುದು ವಿಶೇಷವಾಗಿದೆ.
ದೇವಸ್ಥಾನಕ್ಕೆ ಬರುವ ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸುವ ಜಾವೆದ್, “ನಾವು ಭಾರತೀಯರು. ನನ್ನ ಅರ್ಧದಷ್ಟು ಕುಟುಂಬ ಹಿಂದೂಗಳೇ ಆಗಿದ್ದಾರೆ. ಹಿಂದು, ಮುಸ್ಲಿಂ ವೈಷಮ್ಯದಲ್ಲಿ ಯಾವುದೇ ಹುರುಳಿಲ್ಲ. ಈ ದೇವಸ್ಥಾನದಲ್ಲಿದ್ದರೆ ನನಗೆ ಭಾರತದಲ್ಲಿಯೇ ಇದ್ದೇನೆ ಎಂದು ಭಾಸವಾಗುತ್ತದೆ” ಎನ್ನುತ್ತಾರೆ.

ಧಾರ್ಮಿಕ ಅಸಹಿಷ್ಣುತೆಯಿಂದ ಅನೇಕ ಗಲಭೆ, ಪ್ರಾಣಹಾನಿಯಾಗುತ್ತಿರುವ ಸಂದರ್ಭದಲ್ಲಿ ಇವರು ಕೋಮು ಸೌಹಾರ್ದಕ್ಕೆ ಅಪರೂಪದ ನಿದರ್ಶನದಂತೆ ಕಾಣುತ್ತಾರೆ. ಜಾವೆದ್ ನಡೆ ಎಲ್ಲರಿಗೂ ಮಾದರಿಯಾಗುವಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...