alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದೆ 2.6 ಕೋಟಿ ರೂ. ಮೌಲ್ಯದ ಸೂಟ್

ಹಾಲಿವುಡ್ ನಟ ರಾಬರ್ಟ್ ಡಾನಿಯ ಒರಿಜಿನಲ್ ‘ಐರನ್ ಮ್ಯಾನ್’ ಸೂಟ್ ಕಾಣೆಯಾಗಿದ್ದು, ಭಾರಿ ಸುದ್ದಿಯಾಗಿದೆ. ಈ ಸೂಟ್ ಬೆಲೆ ಬರೋಬ್ಬರಿ 2.6 ಕೋಟಿ ರೂಪಾಯಿ.

ಈ ಸೂಟ್ ಅನ್ನು ನಟ ರಾಬರ್ಟ್ ಡಾನಿ, ಫಸ್ಟ್ ಮಾರ್ವಲ್ ಸಿನೆಮ್ಯಾಟಿಕ್ ಯುನಿವರ್ಸ್ ನಿರ್ಮಾಣದ ‘ಐರನ್ ಮ್ಯಾನ್’ ಸಿನಿಮಾದಲ್ಲಿ ಹಾಕಿಕೊಂಡಿದ್ದು, ಭಾರಿ ಜನಪ್ರಿಯತೆ ಗಳಿಸಿತ್ತು. 2008 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬರೋಬ್ಬರಿ 16 ಬಿಲಿಯನ್ ಯು ಎಸ್ ಡಾಲರ್ ಗಳಿಕೆ ಮಾಡಿದೆ.

ಈ ಸೂಟ್ ಕಾಣೆಯಾಗಿರುವ ಬಗ್ಗೆ ಸೂಟ್ ಫೆಸಿಯೋಮಾ ನೈಬರ್ ಹುಡ್ ಸ್ಟೋರೇಜ್ ಫೆಸಿಲಿಟಿಯವರು ಮಾಹಿತಿ ನೀಡಿದ್ದು, ಕಳೆದ ಫೆಬ್ರವರಿಯಿಂದ ಏಪ್ರಿಲ್ ಒಳಗಿನ ಅವಧಿಯಲ್ಲಿ ಕಾಣೆಯಾಗಿದೆ ಎಂದು ಹೇಳಲಾಗಿದೆ. ಕೆಂಪು ಹಾಗೂ ಬಂಗಾರದ ಬಣ್ಣದ ಈ ಸೂಟ್ ಗಾಗಿ ಅಮೆರಿಕದ ಲಾಸ್ ಏಂಜಲಿಸ್ ಪೊಲೀಸರು ಈಗ ಹುಡುಕಾಟ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...