alex Certify
ಕನ್ನಡ ದುನಿಯಾ       Mobile App
       

Kannada Duniya

25 ಸೆಕೆಂಡ್ ಮುಂಚಿತವಾಗಿ ರೈಲು ಬಂದಿದ್ದಕ್ಕೆ ಕ್ಷಮೆ ಯಾಚಿಸಿದ ಜಪಾನ್ ರೈಲ್ವೆ…!

ಭಾರತದಲ್ಲಿ ರೈಲು ಪ್ರಯಾಣ ಅಂದ್ರೆ ಆರಾಮದಾಯಕ, ಅಷ್ಟೇ ಸುರಕ್ಷಿತ ಜೊತೆಗೆ ಟಿಕೆಟ್ ದರವೂ ಕಡಿಮೆ. ಆದ್ರೆ ಭಾರತದಲ್ಲಿ ರೈಲುಗಳು ಸರಿಯಾಗಿ ಸಮಯ ಪಾಲಿಸಲ್ಲ. ಯಾವುದೋ ಸಮಯಕ್ಕೆ ಬರುವುದು, ಹೋಗುವುದು ಹೀಗಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿರುತ್ತೆ.

ಆದ್ರೆ ಇದಕ್ಕೆ ತದ್ವಿರುದ್ಧವಾಗಿದೆ ಜಪಾನಿನ ರೈಲ್ವೆ. ಕೇವಲ 25 ಸೆಕೆಂಡ್ ಮುಂಚಿತವಾಗಿ ರೈಲು ಬಂದಿದ್ದಕ್ಕೆ ಪ್ರಯಾಣಿಕರಲ್ಲಿ ಜಪಾನ್ ರೈಲ್ವೆ ಕ್ಷಮೆಯಾಚಿಸಿದೆ. ಜಪಾನಿನ ನೊಟೊಗೊವಾ ರೈಲ್ವೆ ನಿಲ್ದಾಣದಿಂದ, 7 ಗಂಟೆ 35 ಸೆಕೆಂಡಿಗೆ ಹೊರಡಬೇಕಿದ್ದ ರೈಲು, 7 ಗಂಟೆ 12 ಸೆಕೆಂಡ್ ಗೆ ಹೊರಟಿದೆ. ಹೀಗಾಗಿ ಷಿಗಾ ರೈಲ್ವೆ ನಿಲ್ದಾಣಕ್ಕೆ 25 ಸೆಕೆಂಡ್ ಮುಂಚಿತವಾಗಿ ರೈಲು ಆಗಮಿಸಿದೆ.

ನೊಟೊಗೊವಾ ರೈಲ್ವೆ ನಿಲ್ದಾಣದಲ್ಲಿ, ಪ್ಲಾಟ್ ಫಾರ್ಮ್ ಖಾಲಿ ಇದೆ ಎಂದು ಭಾವಿಸಿದ ಚಾಲಕ 25 ಸೆಕೆಂಡ್ ಮುಂಚಿತವಾಗಿ ಹೊರಟುಬಿಟ್ಟ. ಆದ್ರೆ ಅಲ್ಲಿ ಒಬ್ಬ ಪ್ರಯಾಣಿಕರಿರುವುದನ್ನು ಚಾಲಕ ಗಮನಿಸಿರಲಿಲ್ಲ. ಈ ಸಂಬಂಧ ರೈಲ್ವೆ ಇಲಾಖೆಗೆ ಆ ಪ್ರಯಾಣಿಕ ವರದಿ ಮಾಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಪ್ರಧಾನ ಕಚೇರಿ ಪ್ರಯಾಣಿಕನ ಕ್ಷಮೆ ಯಾಚಿಸಿದೆ. ನಮ್ಮಿಂದ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಈ ಬಗ್ಗೆ ನಾವು ಮೌಲ್ಯಮಾಪನ ಮಾಡುತ್ತೇವೆ. ಮತ್ತು ಇನ್ನೆಂದು ಇಂತಹ ಅನಾನುಕೂಲತೆ ನಡೆಯದಂತೆ ನೋಡಿಕೊಳ್ಳುತ್ತೇವೆ ಅಂತಾ ತಿಳಿಸಿದೆ.

 

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...