alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಿಡ್ಜ್ ನಿಂದ ಹೊರ ತೆಗೆದಿಟ್ರೂ ಕರಗೋದಿಲ್ಲ ಐಸ್ ಕ್ರೀಂ

ice

ಐಸ್ ಕ್ರೀಂ ಅಂದ್ಮೇಲೆ ಅದನ್ನು ಗಬಗಬನೆ ತಿಂದ್ರೆ ಮಜವಿಲ್ಲ, ನಿಧಾನವಾಗಿ ಸವಿಯಬೇಕು. ಆದ್ರೆ ನಾವು ಪೂರ್ತಿ ತಿನ್ನೋದ್ರಲ್ಲಿ ಅದು ಕರಗಿ ಹೋಗುತ್ತದೆ. ಈ ಸಮಸ್ಯೆಗೆ ಜಪಾನ್ ವಿಜ್ಞಾನಿಗಳು ಪರಿಹಾರ ಕಂಡು ಹಿಡಿದಿದ್ದಾರೆ.

ice-cream

ನೀವು ಎಷ್ಟು ತಡವಾಗಿ ತಿಂದ್ರೂ ಕರಗದೇ ಇರುವಂತಹ ವಿಶಿಷ್ಟ ಐಸ್ ಕ್ರೀಂ ಕಂಡು ಹಿಡಿದಿದ್ದಾರೆ. ಇದಕ್ಕಾಗಿ ಕನಜವ ಯೂನಿವರ್ಸಿಟಿಯ ವಿಜ್ಞಾನಿಗಳು ಐಸ್ ಕ್ರೀಂ ಮೆಲ್ಟಿಂಗ್ ಪಾಯಿಂಟ್ ಅನ್ನೇ ಜಾಸ್ತಿ ಮಾಡಿದ್ದಾರೆ. ರೂಮ್ ಟೆಂಪ್ರೇಚರ್ ನಲ್ಲಿ 3 ಗಂಟೆ ಇದನ್ನು ಹಾಗೇ ಇಟ್ರೂ ಕರಗುವುದಿಲ್ಲ.

ಹೇರ್ ಡ್ರೈಯರ್ ಮೂಲಕ 5 ನಿಮಿಷಗಳ ಬಿಸಿ ಗಾಳಿ ಹಾಕಿ ಪರೀಕ್ಷಿಸಲಾಗಿದ್ದು, ಐಸ್ ಕ್ರೀಂ ಮಾತ್ರ ಕರಗಿರಲಿಲ್ಲ, ಅದೇ ಶೇಪ್ ನಲ್ಲೇ ಇತ್ತು. ಯಾಕಂದ್ರೆ ಸ್ಟ್ರಾಬೆರೀಸ್ ನಿಂದ ಹೊರತೆಗೆದ ಪಾಲಿಫೀನಾಲ್ ಅನ್ನೋ ದ್ರವವನ್ನು ವಿಜ್ಞಾನಿಗಳು ಐಸ್ ಕ್ರೀಂ ಗೆ ಬೆರೆಸಿದ್ದಾರೆ. ಇದನ್ನು ಹಾಕಿದ್ರೆ ನೀರು ಮತ್ತು ಎಣ್ಣೆ ಬೇರೆಯಾಗುವುದಿಲ್ಲ. ಚಾಕಲೇಟ್, ವೆನಿಲ್ಲಾ ಮತ್ತು ಸ್ಟ್ರಾಬೆರಿ ಮೂರು ಫ್ಲೇವರ್ ನಲ್ಲೂ ಕರಗದೇ ಇರುವ ಐಸ್ ಕ್ರೀಂ ಮಾಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...