alex Certify
ಕನ್ನಡ ದುನಿಯಾ       Mobile App
       

Kannada Duniya

ಉಡಾವಣೆಗೊಂಡ ಮರುಕ್ಷಣದಲ್ಲೇ ಸ್ಫೋಟವಾಯ್ತು ರಾಕೆಟ್

ಜಪಾನಿನ ಮೊದಲ ಖಾಸಗಿ ಬೆಂಬಲಿತ ರಾಕೆಟ್ ಉಡಾವಣೆಗೊಂಡ ಮರುಕ್ಷಣದಲ್ಲೇ ಸ್ಫೋಟಗೊಂಡಿದೆ. ಜಪಾನ್ ನ ಅತಿ ದೊಡ್ಡ ಇಂಟರ್ನೆಟ್ ಸೇವಾದಾರರಾದಂತಾ ಇಂಟರ್ಸೆಲ್ಲರ್ ಸಂಸ್ಥೆಗೆ ಸೇರಿದ ರಾಕೆಟ್ ಉಡಾವಣೆಗೊಂಡ ಕೂಡಲೇ ಸ್ಫೋಟಗೊಂಡು ಅಗ್ನಿಯ ಉಂಡೆಗಳಂತೆ ಕೆಳಗೆ ಬಿದ್ದಿವೆ.

ಟಕಾಫುಮಿ ಹುರೈ ಉಡಾವಣಾ ಕೇಂದ್ರದಿಂದ ಮುಂಜಾನೆ 5.30 ಕ್ಕೆ ಉಡಾವಣೆಗೊಂಡ ಮಾನವರಹಿತ ಮೋಮೋ-2 ರಾಕೆಟ್ ಕಕ್ಷೆ ತಲುಪುವಲ್ಲಿ ವಿಫಲವಾಗಿದೆ. 2017 ರ ಜುಲೈ ತಿಂಗಳಿನಲ್ಲೂ ಇದೇ ರಾಕೆಟ್ ಉಡಾವಣೆಗೊಂಡ ಒಂದೇ ನಿಮಿಷಕ್ಕೆ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. ಈ ಬಾರಿಯೂ ರಾಕೆಟ್ ಗುರಿ ತಲುಪುವಲ್ಲಿ ವಿಫಲಗೊಂಡಿದೆ.

ಭಾರೀ ಹೊಗೆ ಉಗುಳುತ್ತಾ ಮೇಲಕ್ಕೆ ಜಿಗಿದ ರಾಕೆಟ್ ಒಂದೇ ಕ್ಷಣದಲ್ಲಿ ಸ್ಫೋಟಗೊಂಡಿರೋದಕ್ಕೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದ್ರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವೀಕ್ಷಣಾ ಸಾಧನಗಳನ್ನ ಹೊತ್ತೊಯ್ಯುತ್ತಿದ್ದ ರಾಕೆಟ್ ಪತನಕ್ಕೆ ಈಗ ಬಾಹ್ಯಾಕಾಶ ವಿಜ್ಞಾನಿಗಳು ಕಾರಣ ಹುಡುಕುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...