alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ ಸ್ಟಾಗ್ರಾಮ್ನಲ್ಲಿ ಭಾರೀ ಸದ್ದು ಮಾಡ್ತಿದ್ದಾಳೆ ಜಪಾನ್ ನ ಈ ಅಜ್ಜಿ

ಜಪಾನ್ ನ ವೃದ್ಧೆಯೊಬ್ಬಳು ಇನ್ ಸ್ಟಾಗ್ರಾಮ್ನಲ್ಲಿ ಮೋಡಿ ಮಾಡಿದ್ದಾಳೆ. 90ರ ಹರೆಯದ ಈಕೆಗೆ 40,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇವಳ ಚಿತ್ರ- ವಿಚಿತ್ರ ಸೆಲ್ಫಿಗಳನ್ನು ನೋಡಿದ್ರೆ ನೀವು ಕೂಡ ಫ್ಯಾನ್ ಆಗಿಬಿಡ್ತೀರಾ.

72ನೇ ವಯಸ್ಸಿನಲ್ಲಿ ಹಿರಿಯಜ್ಜಿಗೆ ಫೋಟೋಗ್ರಫಿ ಬಗ್ಗೆ ಆಸಕ್ತಿ ಮೂಡಿತ್ತು. ಕಿಮಿಕೋ ನಿಶಿಮೋಟೋ ಫೋಟೋಗ್ರಫಿ ಬಗ್ಗೆ ತರಬೇತಿ ಕೂಡ ಪಡೆದ್ಲು. ಆಮೇಲೆ ಇವಳ ಕ್ಯಾಮರಾ ಕಮಾಲ್ ಮಾಡಲು ಶುರುಮಾಡಿತ್ತು. ತರಹೇವಾರಿ ಫೋಟೋಗಳು ಜಾಲತಾಣಗಳಲ್ಲಿ ಸದ್ದು ಮಾಡಲಾರಂಭಿಸಿದ್ವು.

ವಿಶೇಷ ಅಂದ್ರೆ ಫೋಟೋಗಾಗಿ ಈಕೆ ಬಹಳ ರಿಸ್ಕ್ ತೆಗೆದುಕೊಳ್ತಾಳೆ. ಅಪಾಯಕಾರಿ ಸಾಹಸ ಮಾಡ್ತಾಳೆ. ಆದ್ರೆ ಈವರೆಗೂ ಒಮ್ಮೆಯೂ ಗಾಯಗೊಂಡಿಲ್ಲವಂತೆ. ಅಜ್ಜಿಗೆ ಮೊಮ್ಮಕ್ಕಳು ಮಾತ್ರವಲ್ಲ ಮರಿಮಕ್ಕಳೂ ಇದ್ದಾರೆ. ಆದ್ರೂ ಫೋಟೋಗ್ರಫಿ ಹವ್ಯಾಸ ಬಿಟ್ಟು ಹೋಗಿಲ್ಲ.

ಕಿಮಿಕೋ ಕ್ಲಿಕ್ಕಿಸಿರೋ ಫೋಟೋಗಳನ್ನು ಹಲವು ಬಾರಿ ಪ್ರದರ್ಶನಕ್ಕೂ ಇಡಲಾಗಿತ್ತು. ತನ್ನ ಸಾಹಸಮಯ ಫೋಟೋಗಳು ಇಷ್ಟು ಫೇಮಸ್ ಆಗಿರೋದನ್ನು ನೋಡಿ ಕಿಮಿಕೋ ಅಚ್ಚರಿಪಡ್ತಾಳೆ.

5 ವರ್ಷಗಳ ಹಿಂದೆ ಕಿಮಿಕೋಳ ಪತಿ ಮೃತಪಟ್ಟಿದ್ದಾನೆ. ಆದ್ರೆ ಈಗಲೂ ತಾನು ಕ್ಲಿಕ್ಕಿಸಿರೋ ಫೋಟೋಗಳನ್ನೆಲ್ಲ ಅವನಿಗೆ ತೋರಿಸುತ್ತೇನೆ ಎನ್ನುತ್ತಾಳೆ ಹಿರಿಯಜ್ಜಿ. ಕಿಮಿಕೋಳ ಫೋಟೋಗ್ರಫಿಗೆ ಪತಿ ಕೂಡ ಸಾಕಷ್ಟು ಸಹಕಾರ ನೀಡಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...