alex Certify
ಕನ್ನಡ ದುನಿಯಾ       Mobile App
       

Kannada Duniya

58 ಬಾಟಲಿ ವಿಸ್ಕಿಯ ಬೆಲೆ 3.25 ಕೋಟಿ ರೂ.

ವಿಸ್ಕಿ ಪ್ರಿಯರೆಲ್ಲ ಜಪಾನ್ ನ ಹಾನ್ಯು ಡಿಸ್ಟಿಲರಿ ಬಗ್ಗೆ ಕೇಳಿರ್ತೀರಾ. 2000ನೇ ಇಸ್ವಿಯಲ್ಲಾದ ರಿಸೆಶನ್ ನಿಂದಾಗಿ ಕಂಪನಿ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿತ್ತು. ಆದ್ರೆ ಕಂಪನಿಯ ಮಾಲೀಕ ಇಚಿರೊ ಅಕುಟೊ ಅತ್ಯಂತ ನಿಧಾನವಾಗಿ ವಿಸ್ಕಿ ತಯಾರಿಕಾ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ.

ಇದೀಗ 58 ಬಾಟಲಿ ವಿಸ್ಕಿ ಸಿದ್ಧವಾಗಿದೆ. ಈ ವಿಸ್ಕಿಯನ್ನು ಹರಾಜು ಹಾಕಲಾಗುತ್ತಿದ್ದು, 58 ಬಾಟಲಿ ವಿಸ್ಕಿಗೆ 3.25 ಕೋಟಿ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. 2015ರಲ್ಲಿ ಬಹಮಾಸ್ ನಲ್ಲಿ 54 ಬಾಟಲಿ ವಿಸ್ಕಿ ಬರೋಬ್ಬರಿ 480,000 ಡಾಲರ್ ಗೆ ಹರಾಜಾಗಿತ್ತು.

ಈ ವಿಸ್ಕಿ ಬಾಟಲಿಗಳಿಂದ ಇಸ್ಪೀಟ್ ಕೂಡ ಆಡಬಹುದು. ಡೈಮಂಡ್ಸ್, ಕ್ಲಬ್ಸ್, ಹಾರ್ಟ್ಸ್ ನ 13 ಎಲೆಗಳು ಹಾಗೂ ಎರಡು ಜೋಕರ್ ಗಳಿವೆ. ಪ್ರತಿ ವಿಸ್ಕಿ ಬಾಟಲಿಯ ಬೆಲೆ ಅಂದಾಜು 8,620 ಡಾಲರ್. ಈ ದುಬಾರಿ ವಿಸ್ಕಿಯನ್ನು ಯಾರು ಖರೀದಿ ಮಾಡ್ತಾರೆ ಅನ್ನೋದೇ ಸದ್ಯದ ಕುತೂಹಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...