alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಯಾಗಿ ಚಂದ್ರನ ಮೇಲೆ ಕಾಲೂರಲಿದ್ದಾರೆ ಜಪಾನಿನ ಬಿಲಿಯನೇರ್

ಚಂದ್ರನ ಮೇಲೆ ಮಾನವ ಎಂದೋ ಇಳಿದಾಗಿದೆ ಎಂಬುದು ಗೊತ್ತು. ನೀಲ್ ಆರ್ಮ್ ಸ್ಟ್ರಾಂಗ್ ಹೋಗಿದ್ದು ಗಗನಯಾತ್ರಿಯಾಗಿ. ಈಗ ದುಡ್ಡಿದ್ದರೆ ಪ್ರವಾಸಿಯಾಗಿಯೂ ಹೋಗಬಹುದು. ಅಂತಹ ಆಸಕ್ತಿ ಉಳ್ಳವರಿಗಾಗಿ ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆ ಇಂತಹದ್ದೊಂದು ಪ್ರವಾಸಿ ಪ್ಯಾಕೇಜ್ ಒಂದು ನೀಡಲು ತಯಾರಿ ನಡೆಸಿದೆ.

ಈ ಯೋಜನೆ ಕಾರ್ಯಗತವಾದದ್ದೇ ಆದಲ್ಲಿ ಜಪಾನಿನ ಬಿಲಿಯಾಧಿಪತಿ, ಆನ್ ಲೈನ್ ಫ್ಯಾಶನ್ ಉದ್ಯಮಿ ಯೂಸಕು ಮಾಯಾಝವ ಚಂದ್ರನ ಮೇಲೆ ಕಾಲಿಟ್ಟ ಮೊದಲ ಪ್ರವಾಸಿ ಎನ್ನಿಸಿಕೊಳ್ಳಲಿದ್ದಾನೆ. ತನ್ನ ಜೊತೆಗೆ 6ರಿಂದ 8 ಮಂದಿಯ ಕಲಾವಿದರ ತಂಡವನ್ನೂ ಹೊತ್ತೊಯ್ಯಲು ಆತ ಯೋಚಿಸಿದ್ದು ಇದಕ್ಕಾಗಿ ಆತ ಈಗಾಗಲೇ ಸ್ಪೇಸ್ ಎಕ್ಸ್ ಸಂಸ್ಥೆಗೆ ದೊಡ್ಡ ಮೊತ್ತವೊಂದನ್ನು ನೀಡಿದ್ದಾನೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2023ರಲ್ಲಿ ಆತ ಚಂದ್ರನ ಮೇಲೆ ಕಾಲಿರಿಸಲಿದ್ದಾನೆ.

ಜಪಾನಿನ ಶ್ರೀಮಂತರಲ್ಲಿ 18ನೇ ಸ್ಥಾನದಲ್ಲಿರುವ ಮಾಯಾಝವ ಇದು ನನ್ನ ಬಾಲ್ಯದ ಕನಸಾಗಿತ್ತು ಎಂದು ತಿಳಿಸಿದ್ದಾನೆ. ಅಷ್ಟಕ್ಕೂ ಆತ ತನ್ನೊಂದಿಗೆ ಕಲಾವಿದರ ತಂಡವನ್ನು ಕರೆದೊಯ್ಯುವುದು ಸುಮ್ಮನೇ ಅಲ್ಲ. ಅದಕ್ಕೂ ಒಂದು ಉದ್ದೇಶ ಇದೆ. ಅವರು ಭೂಮಿಗೆ ಹಿಂದಿರುಗಿದ ಬಳಿಕ ಅಲ್ಲಿ ಆದ ಅನುಭವಗಳನ್ನು ಇಲ್ಲಿ ರಚಿಸಿದರೆ ಅದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬಲ್ಲುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾನಂತೆ. ಎಷ್ಟು ಒಳ್ಳೆ ಚಿಂತನೆ ಅಲ್ವಾ? ನಾನು, ನನ್ನವರು ಎಂಬ ಲೆಕ್ಕಾಚಾರಗಳನ್ನೇ ಹಾಕುತ್ತಾ ಕೂರುವ ಇಂದಿನ ಕಾಲದಲ್ಲಿ ಜಪಾನಿನ ಈ ಬಿಲಿಯನೇರ್ ಮಾತ್ರ ಡಿಫರೆಂಟ್ ಆಗಿ ಯೋಚಿಸಿದ್ದಾನೆ. ಆಲ್ ದಿ ಬೆಸ್ಟ್ ಯೂಸಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...