alex Certify
ಕನ್ನಡ ದುನಿಯಾ       Mobile App
       

Kannada Duniya

3 ನಿಮಿಷ ಮುಂಚೆ ಲಂಚ್ ಬ್ರೇಕ್ ತೆಗೆದುಕೊಂಡಿದ್ದ ನೌಕರನಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

ಜಪಾನಿಗರು ತಮ್ಮ ಕರ್ತವ್ಯಕ್ಕೆ ಎಷ್ಟು ಒತ್ತು ನೀಡುತ್ತಾರೆಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ರಜೆಯನ್ನು ಪಡೆಯದೆ ನೌಕರರು ಕರ್ತವ್ಯ ನಿರ್ವಹಿಸುವ ಕಾರಣ ಒತ್ತಡಕ್ಕೊಳಗಾಗುತ್ತಿದ್ದು, ಹೀಗಾಗಿ ಸರ್ಕಾರವೇ ಕಡ್ಡಾಯವಾಗಿ ರಜೆ ಪಡೆಯುವ ನಿಯಮವನ್ನು ಜಾರಿಗೆ ತಂದಿದೆ.

ಇಂಥದರ ಮಧ್ಯೆ ನೌಕರನೊಬ್ಬ ಮಾಡಿರುವ ಸಣ್ಣ ಯಡವಟ್ಟು ಶಿಕ್ಷೆಗೊಳಗಾಗುವಂತೆ ಮಾಡಿದೆ. ಪಶ್ಚಿಮ ಜಪಾನಿನ ಕೋಬೆ ನಗರದ ನೀರು ಸರಬರಾಜು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ನೌಕರ, ನಿಗದಿತ ಸಮಯಕ್ಕಿಂತ ಮೂರು ನಿಮಿಷ ಮುನ್ನ ಲಂಚ್ ಬ್ರೇಕ್ ತೆಗೆದುಕೊಂಡಿದ್ದನೆನ್ನಲಾಗಿದೆ.

ಕಳೆದ ಏಳು ತಿಂಗಳ ಅವಧಿಯಲ್ಲಿ 23 ಬಾರಿ ಈ ನೌಕರ ಮೂರು ನಿಮಿಷ ಮುಂಚಿತವಾಗಿ ಲಂಚ್ ಬ್ರೇಕ್ ತೆಗೆದುಕೊಂಡಿದ್ದ ಕಾರಣ, ಹಿರಿಯ ಅಧಿಕಾರಿಗಳು ಆತನ ಸಂಬಳದಿಂದ ಅರ್ಧ ದಿನದ ವೇತನ ಕಟ್ ಮಾಡಿದ್ದಾರೆ. ಈ ವಿಚಾರ ಜಪಾನಿನ ಸಾಮಾಜಿಕ ಜಾಲತಾಣಗಳಲ್ಲಿ ಈಗ ಪರ-ವಿರೋಧದ ಅಭಿಪ್ರಾಯಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...