alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆ ಆಲೋಚನೆ ಮಾಡಿದ್ದ 9 ಮಂದಿಗೆ ಆಗಿದ್ದೇನು?

ಜಪಾನ್ ನಲ್ಲಿ ಸರಣಿ ಹಂತಕನೊಬ್ಬ 9 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆಯಾದವರೆಲ್ಲ 15-26 ವರ್ಷದೊಳಗಿನ ಯುವಕ, ಯುವತಿಯರು. ಹಂತಕ ತಕಾಹಿರೋ ಶಿರೈಸಿಯನ್ನು ಟ್ವಿಟ್ಟರ್ ಕಿಲ್ಲರ್ ಅಂತಾನೇ ಹೇಳಲಾಗ್ತಿದೆ. ಸಾಮಾಜಿಕ ತಾಣಗಳಲ್ಲಿ ಆತ್ಮಹತ್ಯೆಯ ಆಲೋಚನೆ ಬಗ್ಗೆ ಪೋಸ್ಟ್ ಮಾಡಿದವರನ್ನೇ ಈತ ಟಾರ್ಗೆಟ್ ಮಾಡಿದ್ದ.

23 ವರ್ಷದ ಮಹಿಳೆಯೊಬ್ಬಳು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವೀಟ್ ಮಾಡಿದ್ಲು. ತನ್ನ ಜೊತೆ ಇನ್ಯಾರಾದ್ರೂ ಸಾಯುವವರಿದ್ರೆ ಚೆನ್ನ ಎಂದಿದ್ಲು, ಅದನ್ನು ಸೂಸೈಡ್ ರಿಕ್ರೂಟ್ಮೆಂಟ್ ಅಂತಾ ಕರೆದುಕೊಂಡಿದ್ಲು. ನಂತರ ಅವಳ ಪತ್ತೆಯೇ ಇರಲಿಲ್ಲ. ಅವಳನ್ನು ತಕಾಹಿರೋ ಹತ್ಯೆ ಮಾಡಿದ್ದ.

ಇದೇ ರೀತಿ ಆತ್ಮಹತ್ಯೆಯ ಆಲೋಚನೆ ಮಾಡಿದ 9 ಜನರನ್ನು ಹಂತಕ ಮುಗಿಸಿಬಿಟ್ಟಿದ್ದಾನೆ. ಕೊನೆಗೆ ಮಹಿಳೆಯೊಬ್ಬಳಿಂದ ಆತ್ಮಹತ್ಯೆ ಬಗ್ಗೆ ಟ್ವೀಟ್ ಮಾಡಿಸಿ, ಪೊಲೀಸರು ಸರಣಿ ಹಂತಕನನ್ನು ಹಿಡಿದಿದ್ದಾರೆ. ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವ ದೇಶಗಳ ಪೈಕಿ ಜಪಾನ್ ಕೂಡ ಒಂದು.

ಹಾಗಾಗಿ ಈ ಬೆಳವಣಿಗೆ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಸಾಮಾಜಿಕ ತಾಣಗಳು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದ್ದು, ಅವುಗಳನ್ನು ನಿರ್ಬಂಧಿಸಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...