alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಗೂ ಬಂತು ಟಾಯ್ಲೆಟ್ ಪೇಪರ್….

japan-toilet

ಪ್ರವಾಸಿಗರ ಆತಿಥ್ಯ ಮತ್ತು ನೈರ್ಮಲ್ಯದ ವಿಚಾರದಲ್ಲಿ ಜಪಾನ್ ಎಲ್ಲಾ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿದೆ. ನಾರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಾಶ್ ರೂಮ್ ಗಳಲ್ಲೆಲ್ಲ ಸ್ಮಾರ್ಟ್ ಫೋನ್ ಗಳಿಗಾಗಿ ಟಾಯ್ಲೆಟ್ ಪೇಪರ್ ಗಳನ್ನು ಪರಿಚಯಿಸಲಾಗಿದೆ.

ಜನರು ತಮ್ಮ ದೇಹಬಾಧೆ ತೀರಿಸಿಕೊಳ್ಳುವ ಸಮಯದಲ್ಲಿ ಫೋನ್ ಕರೆಗೆ ಉತ್ತರಿಸಬೇಕಾದ ಸಂದರ್ಭ ಬಂದರೆ ಈ ಪೇಪರ್ ಮೂಲಕ ಫೋನನ್ನು ಒರೆಸಿ ಸ್ವಚ್ಛಮಾಡಿಕೊಂಡು ಕಾಲ್ ಅಟೆಂಡ್ ಮಾಡಬಹುದು. ಸ್ಮಾರ್ಟ್ ಫೋನ್ ಪರದೆಗಳನ್ನು ಸ್ವಚ್ಛಮಾಡಲು ಅನುಕೂಲವಾಗುವ ರೀತಿಯಲ್ಲಿ ಪೇಪರ್ ಅನ್ನು ತಯಾರಿಸಲಾಗಿದೆ. ಅವುಗಳ ಮೇಲೆ ಸ್ವಾಗತ ಸಂದೇಶ, ವೈಫೈ ಸೇವೆ ಎಲ್ಲೆಲ್ಲಿ ಇದೆ ಎಂಬುದರ ವಿವರ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತಹ ಸಲಹೆಗಳನ್ನು ಮುದ್ರಿಸಲಾಗಿದೆ.

ಟೆಲಿಕಾಂ ದೈತ್ಯ ‘ಎನ್ ಟಿಟಿ ಡೊಕೊಮೋ’ ಹಮ್ಮಿಕೊಂಡಿರುವ ಯೋಜನೆ ಇದಾಗಿದ್ದು, ನಾರಿಟಾ ಟರ್ಮಿನಲ್ ನ 86 ಮಳಿಗೆಗಳು ಹಾಗೂ 7 ರೆಸ್ಟ್ ರೂಮ್ ಗಳಲ್ಲಿ ಸ್ಮಾರ್ಟ್ ಫೋನ್ ಗಾಗಿ ಟಾಯ್ಲೆಟ್ ಪೇಪರ್ ಗಳನ್ನಿಡಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ಜಪಾನ್ ನ ಎಲ್ಲಾ ಸ್ಥಳಗಳಲ್ಲಿ ಸ್ಮಾರ್ಟ್ ಫೋನ್ ಟಾಯ್ಲೆಟ್ ಪೇಪರ್ ಲಭ್ಯವಾಗಲಿದೆ.

ಟಾಯ್ಲೆಟ್ ಸೀಟ್ ಗಿಂತ 5 ಪಟ್ಟು ಹೆಚ್ಚು ಕೀಟಾಣುಗಳು ಸ್ಮಾರ್ಟ್ ಫೋನ್ ಪರದೆಯಲ್ಲಿ ಸೇರಿಕೊಂಡಿರುತ್ತವೆ ಅನ್ನೋದು ಸಂಶೋಧನೆಯಲ್ಲಿ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಲು ಹೈಜಿನಿಕ್ ಪೇಪರ್ ಗಳನ್ನು ಪರಿಚಯಿಸಲಾಗಿದೆ. ವಿಶೇಷ ಅಂದ್ರೆ ಜಪಾನ್ ನಲ್ಲಿ ಟಾಯ್ಲೆಟ್ ಸೀಟ್ ಗಳು ಕೂಡ ಬೆಚ್ಚಗಿರುತ್ತವೆ, ಅವುಗಳ ಉಷ್ಣತೆಯನ್ನು ಬೇಕಾದ ಹಾಗೆ ಅಡ್ಜಸ್ಟ್ ಮಾಡಿಕೊಳ್ಳಬಹುದು. ಪ್ಲಶಿಂಗ್ ಫೋರ್ಸ್ ಅನ್ನು ಕೂಡ ಅಡ್ಜಸ್ಟ್ ಮಾಡಿಕೊಳ್ಳಲು ಅವಕಾಶವಿದೆ. ಹೀಗೆ ಸಕಲ ಸೌಲಭ್ಯವಿರುವ ಸ್ವಚ್ಛ ಸಾರ್ವಜನಿಕ ಶೌಚಾಲಯಗಳಿಗೆ ಪ್ರವಾಸಿಗರು ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...