alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಕಣ್ಣೀರೊರೆಸುವ ಕೆಲಸ ಮಾಡ್ತಿದ್ದಾರೆ ಪುರುಷರು…!

ಬದಲಾಗುತ್ತಿರುವ ಜಗತ್ತಿನಲ್ಲಿ ಚಿತ್ರ-ವಿಚಿತ್ರ ಉದ್ಯೋಗಗಳು ಸೃಷ್ಟಿಯಾಗ್ತಿವೆ. ಬುದ್ದಿವಂತ ಹಾಗೂ ಸ್ಮಾರ್ಟ್ ಯುವಕರಿಗೆ ಸಾಕಷ್ಟು ನೌಕರಿಗಳು ಸಿಗ್ತಿವೆ. ಇದಕ್ಕೆ ಜಪಾನ್ ಉತ್ತಮ ನಿದರ್ಶನ.

ಮಹಿಳೆಯರ ಕಣ್ಣಲ್ಲಿ ನೀರು ಬರೋದು ಸಾಮಾನ್ಯ ಸಂಗತಿ. ಸಣ್ಣ ವಿಚಾರಕ್ಕೂ ಮಹಿಳೆಯರು ಅತ್ತು ಬಿಡ್ತಾರೆ. ಕಚೇರಿ ಕೆಲಸ, ಮನೆ ಕೆಲಸ, ಮಕ್ಕಳು ಹೀಗೆ ಅನೇಕ ಕೆಲಸಗಳನ್ನು ನಿಭಾಯಿಸುವಾಗ ಒತ್ತಡಕ್ಕೊಳಗಾಗುವ ಮಹಿಳೆಯರ ಕಣ್ಣಲ್ಲಿ ನೀರು ಬರುವುದು ಮಾಮೂಲಿ. ಕಣ್ಣೀರು ಬಂದಾಗ ಸುಂದರ ವ್ಯಕ್ತಿ ಕರ್ಚಿಪ್ ಹಿಡಿದು ನಿಂತಿದ್ರೆ ಎಷ್ಟು ಚೆಂದ ಎಂದುಕೊಳ್ತಾರೆ ಕೆಲವರು. ಈಗ ಕರ್ಚಿಪ್ ಹಿಡಿದು ನಿಲ್ಲುವ ಕೆಲಸವನ್ನು ಜಪಾನ್ ಕಂಪನಿಯೊಂದು ನೀಡ್ತಿದೆ.

ಆಶ್ಚರ್ಯವಾದ್ರೂ ಇದು ಸತ್ಯ. ಜಪಾನಿನ ರಾಕೆಟ್ ಇಂಕ್ ಹೆಸರಿನ ಕಂಪನಿ ಮಹಿಳಾ ಉದ್ಯೋಗಿಗಳ ಕಣ್ಣಿರು ಒರೆಸಲು ಪುರುಷ ಉದ್ಯೋಗಿಗಳ ನೇಮಕ ಮಾಡ್ತಿದೆ. ಮಹಿಳೆಯರು ಅತ್ತಾಗ ಅವ್ರಿಗೆ ಕರ್ಚಿಪ್ ನೀಡುವುದು ಪುರುಷರ ಕೆಲಸ. ಜಪಾನಿನಲ್ಲಿ ಇತ್ತೀಚಿಗೆ ಮಹಿಳೆಯರು ಹೆಚ್ಚು ಒತ್ತಡಕ್ಕೊಳಗಾಗುತ್ತಿದ್ದಾರಂತೆ. ದುಃಖ ಬಂದಾಗ ಶೌಚಾಲಯಕ್ಕೆ ಓಡುವ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆಯಂತೆ. ಇದ್ರಿಂದ ಕೆಲಸಕ್ಕೆ ಅಡ್ಡಿಯಾಗ್ತಿದೆ ಎನ್ನುವ ರಾಕೆಟ್ ಇಂಕ್ ಕಂಪನಿ ಮಾಲೀಕರು, ಮಹಿಳೆಯರು ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಲು ಯುವಕರನ್ನು ನೇಮಕ ಮಾಡಿಕೊಳ್ಳಲಾಗ್ತಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...