alex Certify
ಕನ್ನಡ ದುನಿಯಾ       Mobile App
       

Kannada Duniya

ಧೂಮಪಾನ ಮಾಡದವರಿಗೆ ಸಿಕ್ತಿದೆ ಬಂಪರ್ ಆಫರ್

ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಹಲವು ಮಂದಿ ಒತ್ತಡ ನಿವಾರಿಸಿಕೊಳ್ಳುವ ಸಲುವಾಗಿ ಕಾಫಿ, ಟೀ ಅಥವಾ ಧೂಮಪಾನ ಸೇವನೆಗೆ ಮೊರೆ ಹೋಗುತ್ತಾರೆ. ಇಂತಹ ಹವ್ಯಾಸ ಆರೋಗ್ಯಕ್ಕೆ ಹಾನಿಕರವೆಂದು ಗೊತ್ತಿದ್ದರೂ ಕೆಲಸದ ಒತ್ತಡವೆಂದು ಸಮಜಾಯಿಷಿ ನೀಡುತ್ತಾರೆ.

ಆದರೆ ಜಪಾನ್ ಕಂಪನಿಯೊಂದು ಇಂತಹ ಕೆಟ್ಟ ಹವ್ಯಾಸಕ್ಕೆ ತಿಲಾಂಜಲಿ ನೀಡುವ ಸಲುವಾಗಿ ಹೊಸ ಮಾರ್ಗವನ್ನು ಕಂಡುಕೊಂಡಿದ್ದು, ಅದರಲ್ಲಿ ತಕ್ಕ ಮಟ್ಟಿಗಿನ ಯಶಸ್ಸನ್ನೂ ಕಂಡಿದೆ. ಟೋಕಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿರುವ Piala ಧೂಮಪಾನ ಮಾಡದಿರುವ ಸಿಬ್ಬಂದಿಯೊಬ್ಬನ ಕಮೆಂಟ್ ಕಾರಣಕ್ಕೆ ಈ ನೂತನ ವಿಧಾನ ಅನುಸರಿಸಿಕೊಂಡಿದೆ.

Piala ಕಛೇರಿ 29 ನೇ ಅಂತಸ್ತಿನಲ್ಲಿದ್ದು, ಧೂಮಪಾನ ಮಾಡುವ ಸಿಬ್ಬಂದಿ ಅದಕ್ಕಾಗಿ ಪದೇ ಪದೇ ಸ್ಮೋಕಿಂಗ್ ಝೋನ್ ಗೆ ತೆರಳುವ ಕಾರಣ ಧೂಮಪಾನ ಮಾಡದ ಸಿಬ್ಬಂದಿಗೆ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಇದನ್ನು ಗಮನಿಸಿದ ಸಿಬ್ಬಂದಿಯೊಬ್ಬ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದ. ಇದೀಗ ಕಂಪನಿ ಧೂಮಪಾನ ಮಾಡದ ಸಿಬ್ಬಂದಿಗಳಿಗೆ 6 ದಿನಗಳ ಕಾಲ ವೇತನ ಸಹಿತ ರಜೆ ನೀಡಲು ಮುಂದಾಗಿದೆ. ಈ ನಿರ್ಧಾರದ ಬಳಿಕ ಕಂಪನಿಯ 42 ಸಿಬ್ಬಂದಿಯ ಪೈಕಿ ನಾಲ್ಕು ಮಂದಿ ಧೂಮಪಾನ ಚಟ ತೊರೆದಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...